ರಾಜಸ್ಥಾನ: ರಾಜ್ಯದ ಜೈಪುರದ ಫಾರ್ಮ್ ಹೌಸ್ ಒಂದರಲ್ಲಿ ಜೂಜಾಟ, ಅಶ್ಲೀಲ ಪಾರ್ಟಿ ನಡೆಯುತ್ತಿದ್ದಂತ ವಿಚಾರ ತಿಳಿದಂತ ಸೈಬರ್ ಕ್ರೈಂ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಕರ್ನಾಟಕದ ಕೆ ಎಎಸ್ ಅಧಿಕಾರಿ ಸಹಿತ 7 ಮಂದಿ ಬಂಧಿಸಲಾಗಿದೆ.
ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳಿದ್ದಂತ ಕೆ ಎಎಸ್ ಅಧಿಕಾರಿಗಳು ಸಹಿತ ಹಲವು ಅಧಿಕಾರಿಗಳು, ಜೂಜಾಟ, ಅಶ್ಲೀಲ ಪಾರ್ಟಿಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದಂತ ದಾಳಿಯಲ್ಲಿ ಸಿಕ್ಕಿಬಿದ್ದಿರೋದಾಗಿ ತಿಳಿದು ಬಂದಿದೆ.
ಕ್ಯಾಸಿನೋ ಪಾರ್ಟಿಯಲ್ಲಿ ತೊಡಗಿದ್ದಂತ ವೇಳೆಯಲ್ಲಿ ಕೆಎಎಸ್ ಅಧಿಕಾರಿ ಶ್ರೀನಾಥ್ ಸೇರಿದಂತೆ 7 ಮಂದಿಯನ್ನು, ಜೈಪುರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
BIGG NEWS: ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ- ಬಿ.ವೈ ವಿಜಯೇಂದ್ರ ವಾಗ್ದಾಳಿ
ಬಂಧಿತರನ್ನು ಕೆ ಎಎಸ್ ಅಧಿಕಾರಿ ಶ್ರೀನಾಥ್, ಕೋಲಾರದ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್ ಅಂಜಿನಪ್ಪ, ಕೋಲಾರ ನಗರಸಭೆಯ ಸದಸ್ಯ ಸತೀಶ್, ಶಿಕ್ಷಕ ರಮೇಶ್, ಆರ್ ಟಿಓ ಇಲಾಖೆ ಸಿಬ್ಬಂದಿ ಶಬರೀಶ್, ವ್ಯಾಪಾರಿ ಸುಧಾಕರ್ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಲಾಗಿದೆ. ಈ ಮೂಲಕ ಕ್ಯಾಸಿನೋ ರೇಡ್ ನಲ್ಲಿ ರಾಜ್ಯದ 7 ಮಂದಿ ಸರ್ಕಾರಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.