ಮಂಗಳೂರು : ಕಾರ್ಖಾನೆಗಳ ಮಾಲೀಕರಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಗಳ ಸಹಾಯಕ ನಿರ್ದೇಶಕರೊಬ್ಬರು ಸೆರೆಮನೆ ಸೇರಿದ್ದಾರೆ.
ಮಂಗಳೂರಿನ ಕೊಟ್ಟಾರದಲ್ಲಿರುವ ಕಾರ್ಖಾನೆಗಳ ಸಹಾಯಕ ನಿರ್ದೇಶಕ ಕಚೇರಿ ಉಪವಿಭಾಗ- 2 ರಲ್ಲಿ ಕಾರ್ಖಾನೆಗಳ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಹೆಚ್ ಸುರೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು, ಅಲ್ಲದೇ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಬರೋಬ್ಬರಿ 3,49,515 ರೂ ನಗದು ಸೀಜ್ ಮಾಡಲಾಗಿತ್ತು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಬಿಬಿ ಜಕಾತಿ ಇಂದು ಅವರಿಗೆ 4 ವರ್ಷಗಳ ಸಾದಾ ಸಜೆ ಹಾಗೂ 4 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ದಂಡ ಕಟ್ಟದೇ ಹೋದರೇ ಹೆಚ್ಚುವರಿ 6 ತಿಂಗಳ ಸಾದಾ ಸಜೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
SKIN CARE : ಆರೋಗ್ಯಕರ ಚರ್ಮಕ್ಕಾಗಿ ಹಣ್ಣಿಗಳಿಂದ ತಯಾರಿಸಿದ ಸ್ಮೂಥಿ ಪರಿಣಾಮಕಾರಿ, ಒಮ್ಮೆ ಟ್ತೈ ಮಾಡಿ | smoothie
JOB ALERT : ‘ಪದವಿ’ ಪಾಸಾದವರಿಗೆ ಬಂಪರ್ ಸುದ್ದಿ : ನವಮಂಗಳೂರು ಬಂದರಿನಲ್ಲಿ ಉದ್ಯೋಗವಕಾಶ