ನವದೆಹಲಿ: ಭಾರತದ 14ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಂತ ಜಗದೀಪ್ ಧಂಕರ್ ( Jagdeep Dhankhar ) ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ದೇಶದ 14ನೇ ಉಪರಾಷ್ಟ್ರಪತಿಯಾಗಿ ( 14th Vice President of India. ) ಹುದ್ದೆಗೇರಿದ್ದಾರೆ.
ಇಂದು ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಕರ್ ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ರಾಷ್ಟಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.
Delhi | President Droupadi Murmu administers the oath of office to Vice President-elect Jagdeep Dhankhar
Jagdeep Dhankhar becomes the 14th Vice President of India. pic.twitter.com/26m0SdZPXm
— ANI (@ANI) August 11, 2022
ಕಳೆದ ವಾರ ನಡೆದ ಚುನಾವಣೆಯಲ್ಲಿ ಧಂಕರ್ ಅವರು ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನು 346 ಮತಗಳಿಂದ ಸೋಲಿಸಿ, ಗೆಲುವು ಸಾಧಿಸಿದ್ದರು.
ಎಂ.ವೆಂಕಯ್ಯ ನಾಯ್ಡು ಅವರ ಉತ್ತರಾಧಿಕಾರಿಯಾಗಿ ಧಂಕರ್ ಅವರು ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
BIGG BREAKING NEWS : ಕೊಪ್ಪಳದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ : ಇಬ್ಬರು ಸಾವು, ಹಲವರಿಗೆ ಗಾಯ