ಬೆಂಗಳೂರು: ‘ನಿಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ತೋರಿಸಿ ಮತ’ ಕೇಳಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ( BJP Leader ) ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರಂತೆ! ಕರ್ನಾಟಕದ ಜನ ರಾಜ್ಯ ಬಿಜೆಪಿಗರ ಸಾಧನೆಗಳ ರಿಪೋರ್ಟ್ ಕಾರ್ಡ್ ಹಿಡಿದು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ತಯಾರಾಗಿದ್ದಾರೆ. ಜೆ.ಪಿ ನಡ್ಡಾ ಅವರೇ, ಇಲ್ಲಿ ನಿಮ್ಮ ಸರ್ಕಾರ ಸಂಪೂರ್ಣ ಫೇಲ್ ಆಗಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ.
'ನಿಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ತೋರಿಸಿ ಮತ' ಕೇಳಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರಂತೆ!
ಕರ್ನಾಟಕದ ಜನ ರಾಜ್ಯ ಬಿಜೆಪಿಗರ ಸಾಧನೆಗಳ ರಿಪೋರ್ಟ್ ಕಾರ್ಡ್ ಹಿಡಿದು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ತಯಾರಾಗಿದ್ದಾರೆ.
ಜೆ.ಪಿ ನಡ್ಡಾ ಅವರೇ, ಇಲ್ಲಿ ನಿಮ್ಮ ಸರ್ಕಾರ ಸಂಪೂರ್ಣ ಫೇಲ್ ಆಗಿದೆ. pic.twitter.com/T3RJ3e9A02
— Karnataka Congress (@INCKarnataka) December 16, 2022
ತಾ.ಪಂ & ಜಿ.ಪಂ ಚುನಾವಣೆ ನಡೆಸಲು ಯೋಗ್ಯತೆ ಇಲ್ಲ. ಬಿಬಿಎಂಪಿ ಚುನಾವಣೆ ನಡೆಸಲೂ ಯೋಗ್ಯತೆ ಇಲ್ಲ. ಸೋಲಿನ ಭಯಕ್ಕೆ ಚುನಾವಣೆಗಳನ್ನೇ ಮುಂದೂಡುವ, ಮತದಾರರ ಪಟ್ಟಿಯನ್ನೇ ಹೈಜಾಕ್ ಮಾಡುವ ಹೊಸ ಕುತಂತ್ರ ಕಂಡುಕೊಂಡಿದೆ ಬಿಜೆಪಿ. ಒಬಿಸಿ ರಾಜಕೀಯ ಮೀಸಲು ವರದಿ ನೆಪದಲ್ಲಿ ಕಾಲಹರಣ ಮಾಡುವ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದೆ ಎಂದಿದೆ.
ತಾ.ಪಂ & ಜಿ.ಪಂ ಚುನಾವಣೆ ನಡೆಸಲು ಯೋಗ್ಯತೆ ಇಲ್ಲ.
ಬಿಬಿಎಂಪಿ ಚುನಾವಣೆ ನಡೆಸಲೂ ಯೋಗ್ಯತೆ ಇಲ್ಲ.ಸೋಲಿನ ಭಯಕ್ಕೆ ಚುನಾವಣೆಗಳನ್ನೇ ಮುಂದೂಡುವ, ಮತದಾರರ ಪಟ್ಟಿಯನ್ನೇ ಹೈಜಾಕ್ ಮಾಡುವ ಹೊಸ ಕುತಂತ್ರ ಕಂಡುಕೊಂಡಿದೆ ಬಿಜೆಪಿ.
ಒಬಿಸಿ ರಾಜಕೀಯ ಮೀಸಲು ವರದಿ ನೆಪದಲ್ಲಿ ಕಾಲಹರಣ ಮಾಡುವ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದೆ. pic.twitter.com/tRFzWnrUfR
— Karnataka Congress (@INCKarnataka) December 16, 2022
ಶೈಕ್ಷಣಿಕ ವರ್ಷದ ಮಧ್ಯೆಯೇ ಬೋಧಕರ ವರ್ಗಾವಣೆಗೆ ಸರ್ಕಾರ ತುರಾತುರಿ ತೋರುತ್ತಿದೆ. ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಚಟುವಟಿಕೆಗಳಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿರುವುದನ್ನೂ ಸರ್ಕಾರ ಕಡೆಗಣಿಸಿದೆ. ಚುನಾವಣೆ ಮುಂಚೆಯೇ ವರ್ಗಾವಣೆ ದಂಧೆಯಲ್ಲಿ ಸಾಕಷ್ಟು ಹಣ ಮಾಡಿಕೊಳ್ಳುವ ದುರಾಲೋಚನೆಯೇ ಬಿಜೆಪಿ ಎಂದು ಪ್ರಶ್ನಿಸಿದೆ.
ಶೈಕ್ಷಣಿಕ ವರ್ಷದ ಮಧ್ಯೆಯೇ ಬೋಧಕರ ವರ್ಗಾವಣೆಗೆ ಸರ್ಕಾರ ತುರಾತುರಿ ತೋರುತ್ತಿದೆ.
ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಚಟುವಟಿಕೆಗಳಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿರುವುದನ್ನೂ ಸರ್ಕಾರ ಕಡೆಗಣಿಸಿದೆ.
ಚುನಾವಣೆ ಮುಂಚೆಯೇ ವರ್ಗಾವಣೆ ದಂಧೆಯಲ್ಲಿ ಸಾಕಷ್ಟು ಹಣ ಮಾಡಿಕೊಳ್ಳುವ ದುರಾಲೋಚನೆಯೇ @BJP4Karnataka? pic.twitter.com/pnafAz4xVg
— Karnataka Congress (@INCKarnataka) December 16, 2022