ಬೆಂಗಳೂರು: ಈ ಹಿಂದೆ “ನಾನು ಭ್ರಷ್ಟ ಅಧಿಕಾರಿಯಲ್ಲ, ನಾನು ಲಂಚ ಪಡೆಯುವುದಿಲ್ಲ” ಎಂದು ಅಧಿಕಾರಿಗಳು ಬೋರ್ಡ್ ಹಾಕುವ ಅಭಿಯಾನ ಶುರು ಮಾಡಿತ್ತು ಸರ್ಕಾರ. ಸಿಎಂ ಕಚೇರಿಯಲ್ಲಿ ( CM Office ) ಯಾವ ಹುದ್ದೆಗೆ ಎಷ್ಟೆಷ್ಟು ದರ ಎಂಬ ಬೋರ್ಡ್ ಹಾಕಿದರೆ ಒಳಿತು. ಹಾಗೆಯೇ “ಲಂಚ ಪಡೆಯಲಾಗುವುದು, ಹಾಗೂ ಲಂಚ ನೀಡಲಾಗುವುದು” ಎಂಬ ಬೋರ್ಡ್ ಹಾಕಿಕೊಳ್ಳಲಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಹೇಳಿದೆ.
ಈ ಹಿಂದೆ "ನಾನು ಭ್ರಷ್ಟ ಅಧಿಕಾರಿಯಲ್ಲ, ನಾನು ಲಂಚ ಪಡೆಯುವುದಿಲ್ಲ" ಎಂದು ಅಧಿಕಾರಿಗಳು ಬೋರ್ಡ್ ಹಾಕುವ ಅಭಿಯಾನ ಶುರು ಮಾಡಿತ್ತು ಸರ್ಕಾರ.
ಸಿಎಂ ಕಚೇರಿಯಲ್ಲಿ ಯಾವ ಹುದ್ದೆಗೆ ಎಷ್ಟೆಷ್ಟು ದರ ಎಂಬ ಬೋರ್ಡ್ ಹಾಕಿದರೆ ಒಳಿತು.
ಹಾಗೆಯೇ
"ಲಂಚ ಪಡೆಯಲಾಗುವುದು, ಹಾಗೂ ಲಂಚ ನೀಡಲಾಗುವುದು" ಎಂಬ ಬೋರ್ಡ್ ಹಾಕಿಕೊಳ್ಳಲಿ!#PayCM— Karnataka Congress (@INCKarnataka) October 29, 2022
ಈ ಕುರಿತಂತೆ ಸರಣಿ ಟ್ವಿಟ್ ( Twitter ) ಮಾಡಿದ್ದು, ದೆಹಲಿಯಲ್ಲಿ ಹಣ ಕೊಟ್ಟು ಸಚಿವರಾದವರಿದ್ದಾರೆ. ಸಿಎಂ ಹುದ್ದೆಗೆ ₹2,500 ಕೋಟಿ ನೀಡಬೇಕು – ಯತ್ನಾಳ್. ಪೋಸ್ಟಿಂಗ್ಗೆ 80 ಲಕ್ಷ ಕೊಟ್ಟು ಬರುತ್ತಾರೆ – MTB ನಾಗರಾಜ್. ಸಿಎಂ ಕಚೇರಿ ಕೆಲ ಪತ್ರಕರ್ತರಿಗೆ ‘ಸ್ವೀಟ್ ಬಾಕ್ಸ್ ಲಂಚ’ ನೀಡಿದೆ ಈ ಎಲ್ಲಾ ಸಂಗತಿಗಳಿಗೆ ಬಸವರಾಜ ಬೊಮ್ಮಾಯಿ ( Basavaraj Bommai ) ಅವರು ಮಾತನಾಡಲು ಎಷ್ಟು ಕಮಿಷನ್ ನೀಡಬೇಕು? ಎಂದು ಪ್ರಶ್ನಿಸಿದೆ.
◆ದೆಹಲಿಯಲ್ಲಿ ಹಣ ಕೊಟ್ಟು ಸಚಿವರಾದವರಿದ್ದಾರೆ
◆ಸಿಎಂ ಹುದ್ದೆಗೆ ₹2,500 ಕೋಟಿ ನೀಡಬೇಕು
– ಯತ್ನಾಳ್◆ಪೋಸ್ಟಿಂಗ್ಗೆ 80 ಲಕ್ಷ ಕೊಟ್ಟು ಬರುತ್ತಾರೆ
– MTB ನಾಗರಾಜ್
◆ಸಿಎಂ ಕಚೇರಿ ಕೆಲ ಪತ್ರಕರ್ತರಿಗೆ 'ಸ್ವೀಟ್ ಬಾಕ್ಸ್ ಲಂಚ' ನೀಡಿದೆಈ ಎಲ್ಲಾ ಸಂಗತಿಗಳಿಗೆ @BSBommai ಅವರು ಮಾತನಾಡಲು ಎಷ್ಟು ಕಮಿಷನ್ ನೀಡಬೇಕು?#SayCM
— Karnataka Congress (@INCKarnataka) October 29, 2022
ಆಪರೇಷನ್ ಕಮಲದ ( Oparation Kamala ) ಮೂಲಕ ಹೋದ ಸಚಿವ MTB ನಾಗರಾಜ್ ಅವರಿಗೆ ಸೋತರೂ ಸಚಿವ ಸ್ಥಾನ ಕೊಟ್ಟು ಮನ್ನಣೆ ನೀಡಿದೆ ಬಿಜೆಪಿ, ಹಾಗಾಗಿ ಅವರ ಮಾತನ್ನೂ ಗಂಭೀರವಾಗಿ ಪರಿಗಣಿಸಬೇಕು. 80 ಲಕ್ಷ ಪಾವತಿಯ ಬಗ್ಗೆ ಅವರಿಗೆ ಸ್ಪಷ್ಟ ಮಾಹಿತಿ ಇರುವಾಗ ತನಿಖೆಗೆ ನೋಟಿಸ್ ನೀಡದಿರುವುದೇಕೆ? ಸುಮೋಟೋ ಕೇಸ್ ದಾಖಲಿಸಿ ಅವರ ಮಾತಿನ ಮರ್ಮ ಶೋಧಿಸಬೇಕಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಎಂದು ಕೇಳಿದೆ.
ಆಪರೇಷನ್ ಕಮಲದ ಮೂಲಕ ಹೋದ ಸಚಿವ MTB ನಾಗರಾಜ್ ಅವರಿಗೆ ಸೋತರೂ ಸಚಿವ ಸ್ಥಾನ ಕೊಟ್ಟು ಮನ್ನಣೆ ನೀಡಿದೆ ಬಿಜೆಪಿ,
ಹಾಗಾಗಿ ಅವರ ಮಾತನ್ನೂ ಗಂಭೀರವಾಗಿ ಪರಿಗಣಿಸಬೇಕು.80 ಲಕ್ಷ ಪಾವತಿಯ ಬಗ್ಗೆ ಅವರಿಗೆ ಸ್ಪಷ್ಟ ಮಾಹಿತಿ ಇರುವಾಗ ತನಿಖೆಗೆ ನೋಟಿಸ್ ನೀಡದಿರುವುದೇಕೆ? ಸುಮೋಟೋ ಕೇಸ್ ದಾಖಲಿಸಿ ಅವರ ಮಾತಿನ ಮರ್ಮ ಶೋಧಿಸಬೇಕಲ್ಲವೇ @BSBommai ಅವರೇ?
— Karnataka Congress (@INCKarnataka) October 29, 2022