ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆಶಿ ಅವರು ಐಫೋನ್ ( Iphone ) ಗಿಫ್ಟ್ ನೀಡಿದ್ದು, ಮಾಜಿ ಸಚಿವರು ಲ್ಯಾಪ್ ಟಾಪ್ ಹಂಚಿದ್ದು, ಗೋಲ್ಡ್ ಕಾಯಿನ್ ಹಂಚಿಕೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲದಿದ್ದರೆ, ಪಕ್ಷದ ರಾಜ್ಯ ಉಸ್ತುವಾರಿಯಾಗಿ, ನಿಮ್ಮ ಪಕ್ಷದಲ್ಲಿನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಒಳಿತು ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪಕ್ಷವನ್ನು, ಬಿಜೆಪಿ ಕರ್ನಾಟಕ ( BJP Karnataka ) ಟ್ವಿಟ್ಟರ್ ನಲ್ಲಿ ( Twitter ) ಕುಟುಕಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆಶಿ ಅವರು ಐಫೋನ್ ಗಿಫ್ಟ್ ನೀಡಿದ್ದು, ಮಾಜಿ ಸಚಿವರು ಲ್ಯಾಪ್ ಟಾಪ್ ಹಂಚಿದ್ದು, ಗೋಲ್ಡ್ ಕಾಯಿನ್ ಹಂಚಿಕೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲದಿದ್ದರೆ, ಪಕ್ಷದ ರಾಜ್ಯ ಉಸ್ತುವಾರಿಯಾಗಿ, ನಿಮ್ಮ ಪಕ್ಷದಲ್ಲಿನ ಬೆಳವಣಿಗೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು ಒಳಿತು.#CongressLies pic.twitter.com/hhZo2N9HAo
— BJP Karnataka (@BJP4Karnataka) October 29, 2022
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವಂತ ಬಿಜೆಪಿ, ರಾಜ್ಯ ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ಹಾಗೂ #BharatTodoYatra ಸಂದರ್ಭದಲ್ಲಿ ಆಯ್ದ ಪತ್ರಕರ್ತರಿಗೆ ಸ್ವತಃ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಿಂದಲೇ ಹಣ ಸಂದಾಯವಾಗಿರುವ ಚರ್ಚೆ ನಡೆಯುತ್ತಿದೆ ಈ ಬಗ್ಗೆ ದೇಶದ ಜನತೆಗೆ ಉತ್ತರಿಸುವಿರಾ ರಣದೀಪ್ ಸಿಂಗ್ ಸುರ್ಜೇವಾಲ ? ಎಂದು ಪ್ರಶ್ನಿಸಿದೆ.
ರಾಜ್ಯ ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ಹಾಗೂ #BharatTodoYatra ಸಂದರ್ಭದಲ್ಲಿ ಆಯ್ದ ಪತ್ರಕರ್ತರಿಗೆ ಸ್ವತಃ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಿಂದಲೇ ಹಣ ಸಂದಾಯವಾಗಿರುವ ಚರ್ಚೆ ನಡೆಯುತ್ತಿದೆ ಈ ಬಗ್ಗೆ ದೇಶದ ಜನತೆಗೆ ಉತ್ತರಿಸುವಿರಾ @rssurjewala ?#CongressLies
— BJP Karnataka (@BJP4Karnataka) October 29, 2022
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಕಾಂಗ್ರೆಸ್ ನಾಯಕರು ಅನಗತ್ಯ ಆಧಾರ ರಹಿತ ಆರೋಪ ಮಾಡುತ್ತಿರುವ ಮೂಲಕ ಹಳೆಯ ಟೇಪನ್ನೇ ರಿಪೀಟ್ ಮಾಡುತ್ತಿದ್ದಾರೆ. ಭಾರತ ಜೋಡೊ ಪಾದಯಾತ್ರೆ ಫಲ ನೀಡಿಲ್ಲ ಎನ್ನುವುದು ಅವರಿಗೆ ಅರಿವಾದಂತಿದೆ ಎಂದಿದೆ.
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ @rssurjewala, @INCKarnataka ನಾಯಕರು ಅನಗತ್ಯ ಆಧಾರ ರಹಿತ ಆರೋಪ ಮಾಡುತ್ತಿರುವ ಮೂಲಕ ಹಳೆಯ ಟೇಪನ್ನೇ ರಿಪೀಟ್ ಮಾಡುತ್ತಿದ್ದಾರೆ.
ಭಾರತ ಜೋಡೊ ಪಾದಯಾತ್ರೆ ಫಲ ನೀಡಿಲ್ಲ ಎನ್ನುವುದು ಅವರಿಗೆ ಅರಿವಾದಂತಿದೆ.#CongressLies
— BJP Karnataka (@BJP4Karnataka) October 29, 2022