ಮೈಸೂರು: ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ಪುತ್ರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ತಂದೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಪೂರ್ವಜ್ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆ ಆಗ್ತಿರೋದು ನಿಜ ಎಂದು ಹೇಳಿದ್ದಾರೆ.
BIGG NEWS: ಚಿಕ್ಕಮಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ಮೂಡಿಗೆರೆಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನಿಗೆ 45 ವರ್ಷ ಆಗಿದೆ. ಅವರ ದಾರಿ ಅವರು ಹುಡಿಕಿಕೊಂಡು ಹೋಗುತ್ತಾರೆ. ನನಗೆ 75 ವರ್ಷ ಆಗಿದೆ. ಈಗಲೂ ನನ್ನ ಮಾತು ಕೇಳು ಅಂದರೆ ಆಗುತ್ತಾ, ಮಕ್ಕಳಿಗೆ ಸ್ವಾತಂತ್ರ್ಯ ಕೊಡಲಿಲ್ಲ ಅಂದರೆ ಹೇಗೆ, ಅವನ ದಾರಿ ಅವನು ಹುಡುಕಿಕೊಂಡು ಹೋಗಿದ್ದಾರೆ. ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
BIGG NEWS: ಚಿಕ್ಕಮಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ಮೂಡಿಗೆರೆಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
ಈ ವೇಳೆ ಕಾಂಗ್ರೆಸ್ ಟ್ವೀಟ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅವರು ತುಂಬಾ ಅವಸರದಲ್ಲಿ ಇದ್ದಾರೆ. ಸಿಎಂ ಆಗೇ ಬಿಟ್ಟೆ ಅಂತ ಇದ್ದಾರೆ. ದಾವಣಗೆರೆ ಸಮಾವೇಶ ಆದ ಮೇಲೆ ರಾಜ್ಯದ ಜನರಿಂದ ಮತದ ಡಬ್ಬ ನಮಗೆ ತುಂಬುತ್ತೆ ಅಂತ ಭ್ರಮೆಯಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ನಲ್ಲಿ ಕೆಲವರು ಮಂತ್ರಿಗಳು ಆಗಿ ಬಿಟ್ಟಿದ್ದಾರೆ. ಖಾತೆಯನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಏಕವಚನದಲ್ಲಿ ಮಾತಾಡುತ್ತಾರೆ. ದುಶ್ಯಾಸನ, ದುರ್ಯೋಧನನ ದುರಹಂಕಾರ ಜಾಸ್ತಿ ದಿನ ನಿಲ್ಲೊಲ್ಲ ಎಂದು
ವಿಶ್ವನಾಥ್ ಟೀಕಿಸಿದ್ದಾರೆ.