ನವದೆಹಲಿ : ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಇದೇ ಡಿಸೆಂಬರ್ 1 ರಿಂದ ಮಹತ್ವದ ಬದಲಾವಣೆ ಆಗಲಿದೆ. ಬಳಕೆದಾರರು ತಮ್ಮ ಫ್ರೊಫೈಲ್ ಬಯೋದಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳನ್ನು ಹಾಕಿದ್ದರೆ ಸ್ವಯಂಚಾಲಿತವಾಗಿ ತೆಗೆದುಹಾಕುವ ಕ್ರಮಕ್ಕೆ ಮೆಟಾ (Meta) ಸಂಸ್ಥೆ ಮುಂದಾಗಿದೆ.
BIGG NEWS : `JDS’ ಗೆ ಮತ್ತೊಂದು ಬಿಗ್ ಶಾಕ್ : ಶೀಘ್ರವೇ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ?
ಪ್ರೊಫೈಲ್ (Profile) ಮಾಹಿತಿಯನ್ನು ಯಾರು ನೋಡುತ್ತಾರೆ ಎಂಬುದನ್ನು ನಿರ್ಧರಿಸುವ ಬಳಕೆದಾರರ ಹಕ್ಕಿನ ಮೇಲೆ ಈ ಹೊಸ ಫೀಚರ್ಸ್ ಬದಲಾವಣೆ ಬೀರುವುದಿಲ್ಲ ಎಂದು ಕಂಪನಿ ಹೇಳಿದೆ. ಡಿ. 1 ರಿಂದ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ಫೇಸ್ಬುಕ್ ತಿಳಿಸಿದ್ದು, ಈ ಬದಲಾವಣೆಯಿಂದ ಪ್ರೊಫೈಲ್ ಸ್ಕ್ರೋಲಿಂಗ್ನ ಉದ್ದವನ್ನು ಕಡಿಮೆ ಮಾಡಿದಂತಾಗುತ್ತದೆ.
BIGG NEWS : `JDS’ ಗೆ ಮತ್ತೊಂದು ಬಿಗ್ ಶಾಕ್ : ಶೀಘ್ರವೇ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ?
ಫೇಸ್ಬುಕ್ ಆರಂಭಗೊಂಡಾಗ ಖಾಸಗಿತನ ರಕ್ಷಣೆ, ಮಾಹಿತಿ ಸೋರಿಕೆಯ ಅಂಕುಶವು ದೊಡ್ಡ ಸಮಸ್ಯೆಯಾಗಿ ಇರಲಿಲ್ಲ. ಆಗ ಜನರು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಮಾಹಿತಿ ಸೋರಿಕೆ ಹಾಗೂ ಖಾಸಗಿತನವು ಗಂಭೀರ ವಿಚಾರವಾಗಿದೆ ಎಂದು ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾ ತಿಳಿಸಿದೆ.
ಇದರ ಜತೆಗೆ ವೈಯಕ್ತಿಕ ಮಾಹಿತಿಯ ದುರ್ಬಳಕೆಯೂ ಆಗುತ್ತಿದೆ. ಹೀಗಾಗಿ ತೀರಾ ವೈಯಕ್ತಿಕವಾದ ಮಾಹಿತಿಯನ್ನು ಪ್ರೊಫೈಲ್ನಲ್ಲಿ ಸಂಗ್ರಹಿಸದಿರಲು ಸಂಸ್ಥೆಯು ನಿರ್ಧರಿಸಿದೆ. ಅದರಲ್ಲೂ ಇಂದು ಧರ್ಮ, ರಾಜಕೀಯ, ಲೈಂಗಿಕತೆ ಇವೆಲ್ಲವೂ ಕೆಟ್ಟ ರೀತಿಯಲ್ಲಿ ಬಳಕೆ ಆಗುತ್ತಿರುವುದನ್ನು ಕಾಣಬಹುದು. ಇವೆಲ್ಲವೂ ಜನರಿಗೆ ಬೇಕಾಗಿರುವ ಒಳ್ಳೆಯ ಸಂಗತಿಗಳೇ ಆದರೂ ಕೆಲವರು ಈ ವಿಷಯವನ್ನು ಬೇರೆಯದೇ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಮಾರ್ಕ್ ಝುಕರ್ಬರ್ಗ್ ಒಡೆತನದ ಮೆಟಾ ತಿಳಿಸಿದೆ.
BIGG NEWS : `JDS’ ಗೆ ಮತ್ತೊಂದು ಬಿಗ್ ಶಾಕ್ : ಶೀಘ್ರವೇ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ?
ಈ ವರೆಗೂ ಇತರೆ ಸಾಮಾಜಿಕ ಪ್ಲಾಟ್ಫಾರ್ಮ್ನಲ್ಲಿ ಈ ರೀತಿಯ ವಿಷಯಗಳಿಗೆ ಆಸ್ಪದವಿಲ್ಲ. ಫೇಸ್ಬುಕ್ ಒಂದರಲ್ಲೇ ಈ ರೀತಿಯ ವಿಷಯಕ್ಕೆ ಅನುಮತಿಸಿತ್ತು. ಈ ಅಪವಾದದಿಂದ ಮುಕ್ತವಾಗಲು ಈಗ ಫೇಸ್ಬುಕ್ ಹೊಸದೊಂದು ಹೆಜ್ಜೆ ಇರಿಸಿದೆ. ಈ ಅಪವಾದದಿಂದ ಮುಕ್ತವಾಗಲು ಈಗ ಫೇಸ್ಬುಕ್ ಮಹತ್ವದ ಹೆಜ್ಜೆ ಇರಿಸಿದೆ. ಅದರಲ್ಲೂ ಫೇಸ್ಬುಕ್ನಲ್ಲಿ ಕೆಲವು ಮಾಹಿತಿಯನ್ನು ಬೇಕಾದ ಹಾಗೆ ಬರೆದುಕೊಳ್ಳುತ್ತಿದ್ದರು. ಇದಕ್ಕೆ ಈಗ ನಾಂದಿ ಹಾಡಿದಂತಾಗುತ್ತದೆ.
BIGG NEWS : `JDS’ ಗೆ ಮತ್ತೊಂದು ಬಿಗ್ ಶಾಕ್ : ಶೀಘ್ರವೇ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ?