ಮೈಸೂರು: ಚಾಮಜರಾಜನಗರ ಹಿಂದುಳಿದ ಜಿಲ್ಲೆಯಾಗಿದೆ. ಅಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ನೋಡಿಕೊಂಡು ಬನ್ನಿ ಎಂದು ರಾಹುಲ್ ಗಾಂಧಿ ಭೇಟಿಗೆ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಯಾತ್ರೆ ವೇಳೆ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಂಡು ಬನ್ನಿ.ಮತ ಪ್ರಚಾರಕ ಪ್ಯಾಸ್ಟರ್ ಭೇಟಿ ಮಾಡಿ ಆರಂಭವಾದ ಯಾತ್ರೆ ಇದು. ಜೀಸಸ್ ಒಬ್ಬನೇ ದೇವರು ಅನ್ನುವವನ ಭೇಟಿಯಿಂದ ಶುರುವಾದ ಯಾತ್ರೆ ಇದು. ಇದರಲ್ಲಿಯೇ ನಿಮ್ಮ ಉದ್ದೇಶ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜೋಡಿಸುವ ಯಾತ್ರೆ ಅಲ್ಲ ಇದು ಒಡೆಯುವ ಯಾತ್ರೆ. ರಾಜ್ಯಕ್ಕೆ ಬಂದಾಗ ಮಲೈ ಮಹದೇಶ್ವರ ದೇವಸ್ಥಾನಕ್ಕೆ ಹೋಗಿ ಬನ್ನಿ. ಯಡಿಯೂರಪ್ಪ ಸರ್ಕಾರ ಕಾಲದಲ್ಲಿ ಅಲ್ಲಿನ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಅವುಗಳನ್ನು ನೋಡಿಕೊಂಡು ಬನ್ನಿ. ಚಾಮರಾಜನಗರ ಹಿಂದುಳಿದ ಜಿಲ್ಲೆ ಅಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ನೋಡಿಕೊಂಡು ಬನ್ನಿ. ನಂಜನಗೂಡು ಬಂದಾಗ ರಿಂಗ್ ರಸ್ತೆ ನೋಡಿ. ಮೈಸೂರು ವಿಮಾನ ನಿಲ್ದಾಣ ನೋಡಿ ಎಂದು ಹೇಳಿದ್ದಾರೆ.