ಮುಂಬೈ: ಗೋವಿನ ಮಾಂಸ ಸೇವನೆ ಇಸ್ಲಾಂ ನಲ್ಲಿ ನಿಷಿದ್ದ. ನಮ್ಮ ಕುಟುಂಬದಲ್ಲಿ ಯಾರೂ ಗೋಮಾಂಸ ಸೇವಿಸುವುದಿಲ್ಲ ಎಂದು ಖ್ಯಾತ ನಟ ಸಲ್ಮಾನ್ ಖಾನ್‌ರ ತಂದೆ ಸಲೀಂ ಖಾನ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಸಲೀಂ ಖಾನ್, ‘ಪ್ರವಾದಿ ಮೊಹಮ್ಮದರು ತಮ್ಮ ಪಾಠದಲ್ಲಿ ಗೋವಿನ ಹಾಲು ತಾಯಿಯ ಹಾಲಿನಷ್ಟೇ ಪವಿತ್ರ ಎಂದು ಸ್ಪಷ್ಟವಾಗಿ ಹಾಲಿನಷ್ಟೇ ತಿಳಿಸಿದ್ದಾರೆ. ಗೋವನ್ನು ಕೊಲ್ಲಬಾರದು, ಗೋಮಾಂಸ ನಿಷೇಧ ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೂ ಕೆಲ ಮುಸ್ಲಿಮರು ಅದು ಕಡಿಮೆ ಬೆಲೆಗೆ ಸಿಗುವ ಮಾಂಸ ಎಂದು ಬಳಸುತ್ತಾರೆ. ಆದರೆ ನಾನಾಗಲೀ ನಮ್ಮ ಕುಟುಂಬದ ಸದಸ್ಯರಾಗಲೀ ಎಂದಿಗೂ ಗೋವಿನ ಮಾಂಸ ಸೇವಿಸಿಲ್ಲ ಎಂದು ಹೇಳಿದ್ದಾರೆ.
ನಾವು ಬಾಲ್ಯದಿಂದಲೂ ಹಿಂದೂಗಳ ಒಡನಾಟದಲ್ಲಿಯೇ ಬೆಳೆದಿದ್ದೇವೆ. ನಾವು ಹಿಂದೂಗಳು ಆಚರಿಸುವ ಹಬ್ಬಗಳನ್ನು ಆಚರಿಸು ತ್ತೇವೆ. ಸಲ್ಮಾ ಖಾನ್ (ಹಿಂದಿನ ಹೆಸರು ಸುಶೀಲಾ ಚರಕ್) ಜತೆ ವಿವಾಹವಾದಾಗ ನಮ್ಮ ಮನೆಯವರ ಅಭ್ಯಂ ತರವಿರಲಿಲ್ಲ. ನಮ್ಮ ಮಾವ ನನ್ನ ಶಿಕ್ಷಣದ ಬಗ್ಗೆ ಗೌರವ ಹೊಂದಿದ್ದರು. ನಾನು ಯಾವುದೇ ಅಹಿತಕರ ಘಟನೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದೆ. ಈಗ ಮದುವೆಯಾಗಿ 60 ವರ್ಷ ಕಳೆದಿದೆ. ಈಗ ನಾವು ಗಣಪತಿಯನ್ನು ಸಹ ಕೂರಿಸುತ್ತೇವೆ’ ಎಂದು ಹೇಳಿದರು.