ಬೆಂಗಳೂರು: ಇಂದು ದೇಶದ 6 ರಾಜ್ಯಗಳ 13 ಕಡೆಗಳಲ್ಲಿ ಎನ್ಐಎ ಅಧಿಕಾರಿಗಳಿಂದ ದಾಳಿಯನ್ನು ನಡೆಸಲಾಗಿದೆ. ಕರ್ನಾಟಕ ಸೇರಿದಂತೆ 6 ರಾಜ್ಯಗಳ 13 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ತುಮಕೂರು, ಭಟ್ಕಳ ಹಾಗೂ ಬೆಳಗಾವಿಯಲ್ಲಿ ತಲಾ ಒಬ್ಬೊಬ್ಬರು ಸೇರಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆದಿದೆ.
ಈಗಾಗಲೇ 2021ರಲ್ಲಿ ಐಸಿಸ್ ಸಂಪರ್ಕ ಹೊಂದಿದ್ದ ಕಾರಣ, ಓರ್ವನನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ತನಿಖೆ ಮುಂದುವರೆಸಿದ್ದಂತ ಎನ್ಐಎ ಅಧಿಕಾರಿಗಳು, ಇಂದು ಮಧ್ಯಪ್ರದೇಶದ 2 ಕಡೆಗಳಲ್ಲಿ ಗುಜರಾತ್ ನ ನಾಲ್ಕು ಕಡೆ, ಕರ್ನಾಟಕದ ಮೂರು ಕಡೆ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ದಾಳಿ ನಡೆಸಲಾಗಿದೆ.
BREAKING NEWS: ರಾಜ್ಯದ ಮೂರು ಜಿಲ್ಲೆಯಲ್ಲಿ ಎನ್ಐಎ ಅಧಿಕಾರಿಗಳ ದಾಳಿ: ಮೂವರು ಶಂಕಿತ ಉಗ್ರರು ಅರೆಸ್ಟ್
ಕರ್ನಾಟಕದ ಬೆಳಗಾವಿ, ತುಮಕೂರು ಮತ್ತು ಭಟ್ಕಳದಲ್ಲಿ ತಲಾ ಒಬ್ಬೊಬ್ಬ ಶಂಕಿತ ವ್ಯಕ್ತಿಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.