ಉಡುಪಿ: ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಧರ್ಮ, ಜಾತಿಯಾಧಾರಿತ ಭಾಷೆಯಲ್ಲಿ ಬಳಸುವುದು ತಪ್ಪು. ಹೀಗಿದ್ದೂ ಇಲ್ಲೊಬ್ಬ ಪ್ರೊಫೇಸರ್ ಮಾತ್ರ ತರಗತಿಯಲ್ಲಿಯೇ ಮುಸ್ಲಿಂ ವಿದ್ಯಾರ್ಥಿಗಳನ್ನು ಟೆರರಿಸ್ಟ್ ಎಂಬುದಾಗಿ ಸಂಬೋಧಿಸಿ ನಿಂಧನೆ ಮಾಡಿರೋದಾಗಿ ತಿಳಿದು ಬಂದಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆದ ನಂತ್ರ, ಮುಂದೆ ಏನಾಯ್ತು ಅಂತ ಮುಂದೆ ಓದಿ.
ಉಡುಪಿ ಜಿಲ್ಲೆಯ ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನ ಪ್ರೊಫೇಸರ್ ಒಬ್ಬರು, ನವೆಂಬರ್ 26ರಂದು ತರಗತಿಯಲ್ಲಿಯೇ ಮುಸ್ಲೀಂ ವಿದ್ಯಾರ್ಥಿಗಳನ್ನು ಟೆರರಿಸ್ಟ್ ಎಂಬುದಾಗಿ ನಿಂಧನೆ ಮಾಡಿದ್ದಾರೆ ಎನ್ನಲಾಗಿದೆ.
ತರಗತಿಯಲ್ಲಿಯೇ ಹೀಗೆ ನಿಂದಿಸಿದಂತ ಪ್ರಧ್ಯಾಪಕರನ್ನು ವಿದ್ಯಾರ್ಥಿಗಳು ಅಲ್ಲಿಯೇ ಪ್ರಶ್ನಿಸಿದ್ದಾರೆ. ಜೊತೆಗೆ ಮುಸ್ಲೀಂ ಸಮುದಾಯವನ್ನು ಟೆರರಿಸ್ಟ್ ಎಂದು ಕರೆಯಬೇಡಿ. ನಾವು ನಿಮ್ಮ ಮಕ್ಕಳಂತೆ. ನಿಮ್ಮ ಮಕ್ಕಳನ್ನು ಹೀಗೆ ಮಾತನಾಡಿಸುತ್ತೀರಾ ಎಂಬುದಾಗಿ ಆಕ್ಷೇಪಿಸಿದ್ದಾರೆ.
ಶಿವಮೊಗ್ಗ: ನಾಳೆ, ನಾಡಿದ್ದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ವಿದ್ಯಾರ್ಥಿಗಳು ಆಕ್ಷೇಪಿಸಿದ ಬಳಿಕ, ಪ್ರಾಧ್ಯಾಪಕರು ಕ್ಷಮೆ ಕೂಡ ಯಾಚಿಸಿದ್ದಾರೆ. ಆದ್ರೇ ಟೆರರಿಸ್ಟ್ ಎಂದು ಹೇಳಿ, ನೀವು ಕ್ಷಮೆ ಕೇಳಿದ ತಕ್ಷಣ ಮಾಡಿದಂತ ಆರೋಪ ಬದಲಾಗೋದಿಲ್ಲ ಎಂಬುದಾಗಿ ಹೇಳಿದ್ದಾರೆ. ಈ ಎಲ್ಲಾ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ಸೂಕ್ಷ್ಮತೆಯನ್ನು ಅರಿತಂತ ಮಾಹೆ ವಿವಿಯು, ಪ್ರೊಫೇಸರ್ ಅವರ ಮೇಲೆ ಆಂತರೀಕ ತನಿಖೆಗೆ ಆದೇಶಿಸಿದೆ. ಅಲ್ಲದೇ ಅಮಾನತುಗೊಳಿಸಲಾಗಿದೆ.
BIG BREAKING NEWS: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಬೈಕ್ ಸವಾರರು ಸಾವು | BBMP Garbage Truck