ಹಾಸನ: ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಶಿರಸ್ತೇದಾರ್ ಒಬ್ಬರನ್ನು ನಿಂದಿಸಿರುವಂತ ಘಟನೆ ಬೆಳಕಿಗೆ ಬಂದಿದೆ. ದಲಿತ ಎನ್ನುವ ಕಾರಣಕ್ಕಾಗಿ ಉಪ ವಿಭಾಗಾಧಿಕಾರಿಯಿಂದ ನಿಂದನೆಗೆ ಒಳಗಾದಂತ ಶಿರಸ್ತೇದಾರ್ ಛೇ ದಲಿತನಾಗಿ ಹುಟ್ಟಿದ್ದೇ ತಪ್ಪಾ ಎನ್ನುವ ಅವಮಾನದಿಂದ ಸ್ವಯಂ ನಿವೃತ್ತಿಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ನಡೆಯುತ್ತಿದ್ದಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಸಕಲೇಶಪುರ ಉಪವಿಭಾಗಾಧಿಕಾರಿ ರಾಜೇಶ್ ಅವರು, ಅರಕಲಗೂಡು ತಹಶೀಲ್ದಾರ್ ಹಾಗೂ ತಹಶೀಲ್ದಾರ್ ಗ್ರೇಡ್-2 ಪ್ರಭಾರ ಆಗಿದ್ದಂತ ಸ್ವಾಮಿ.ಸಿ ಅವರನ್ನು ನೇಮಿಸಲಾಗಿತ್ತು.
ಸಮೀಕ್ಷೆಯ ಕಾರ್ಯದಿಂದಾಗಿ ತಹಶೀಲ್ದಾರ್ ಹಾಗೂ ತಹಶೀಲ್ದಾರ್ ಗ್ರೇಡ್-2 ಪ್ರಭಾರ ಸ್ವಾಮಿ.ಸಿ ಒಂದೇ ಕಾರಿನಲ್ಲಿ ತೆರಳುತ್ತಿದ್ದದ್ದನ್ನು ಎಸಿ ರಾಜೇಶ್ ಗಮನಿಸಿದ್ದಾರೆ. ಅಲ್ಲದೇ ತಹಶೀಲ್ದಾರ್ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದರಿಂದ ಕೆಂಡಾಮಂಡಲವಾಗಿರುವಂತ ಎಸಿ ರಾಜೇಶ್, ಕಾರು ನಿಲ್ಲಿಸಿ ನಡು ರಸ್ತೆಯಲ್ಲೇ ಪ್ರಭಾರ ತಹಶೀಲ್ದಾರ್ ಗ್ರೇಡ್-2 ಆಗಿದ್ದಂತ ಸ್ವಾಮಿ.ಸಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಹಶೀಲ್ದಾರ್ ವಾಹನದಲ್ಲಿ ತಹಶೀಲ್ದಾರ್ ಸೀಟಿನಲ್ಲಿ ಕುಳಿತುಕೊಳ್ಳಲು ಯಾರು ನಿನಗೆ ಅನುಮತಿ ನೀಡಿದ್ದು? ಕಾರಿನಿಂದ ಇಳಿ ಎಂಬುದಾಗಿ ಇಳಿಸಿ ಅವಮಾನಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಎಸಿ ನಿಂದಿಸಿದ್ದಾರೆ ಎಂಬುದಾಗಿ ತಹಶೀಲ್ದಾರ್ ಗ್ರೇಡ್-2 ಪ್ರಭಾರ ಆಗಿದ್ದಂತ ಸ್ವಾಮಿ.ಸಿ ಅವರು ಅರಕಲಗೂಡು ತಹಶೀಲ್ದಾರ್ ಕಚೇರಿಯ ಬಳಿಯಲ್ಲಿ ಮೂರು ದಿನ ಅಂಬೇಡ್ಕರ್ ಪೋಟೋ ಇರಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು.
ದಲಿತನಾದ ಕಾರಣಕ್ಕೆ ಎಸಿ ರಾಜೇಶ್ ನನಗೆ ಅವಮಾನಿಸಿದ್ದಾರೆ ಎಂಬುದಾಗಿ ಆರೋಪಿಸಿ ಸ್ವಾಮಿ.ಸಿ ನಡೆಸುತ್ತಿದ್ದಂತ ಪ್ರತಿಭಟನೆಗೆ ದಲಿತ ಸಂಘಟನೆಗಳ ಮುಖಂಡರೂ ಸಾಥ್ ನೀಡಿದ್ದರು.
ಈ ಹಿನ್ನಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಪ್ರತಿಭಟನಾ ನಿರತ ಅಧಿಕಾರಿ ಹಾಗೂ ದಲಿತ ಸಂಘಟನೆಗಳೊಂದಿಗೆ ಸಮಸ್ಯೆ ಬಗೆ ಹರಿಸೋ ಸಂಬಂಧ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಆಡಳಿತ ವರ್ಗದಲ್ಲಿ ಹಿರಿಯ ಅಧಿಕಾರಿಗಳು ಹೇಳಿದಂತೆ ಕಿರಿಯ ಅಧಿಕಾರಿಗಳು ಕೇಳಬೇಕು ಎಂಬುದಾಗಿ ಬುದ್ಧಿವಾದ ಹೇಳಿದ್ದರು. ಆ ಬಳಿಕ ತಹಶೀಲ್ದಾರ್ ಗ್ರೇಡ್-2 ಪ್ರಭಾರ ಹುದ್ದೆಯಲ್ಲಿದ್ದಂತ ಸ್ವಾಮಿ.ಸಿ ಅವರನ್ನು, ಆ ಹುದ್ದೆಯನ್ನು ರದ್ದುಗೊಳಿಸಿ, ಈ ಹಿಂದೆ ಇದ್ದಂತ ಶಿರಸ್ತೇದಾರ್ ಹುದ್ದೆಯಲ್ಲೇ ಮುಂದುವರೆಸಿ ಆದೇಶಿಸಿದ್ದಾರೆ.
ಎಸಿಯಿಂದ ಅವಮಾನಕ್ಕೆ ಒಳಗಾಗಿ, ಡಿಸಿಯಿಂದ ಡೀಗ್ರೇಟ್ ಪಡೆದು ಮತ್ತಷ್ಟು ಅವಮಾನಕ್ಕೆ ಒಳಗಾದಂತ ಶಿರಸ್ತೇದಾರ್ ಸ್ವಾಮಿ.ಸಿ ಅವರು, ಇದೀಗ ಆಘಾತಕ್ಕೆ ಒಳಗಾಗಿದ್ದಾರೆ. ಛೇ ನಾನು ದಲಿತನಾಗಿ ಹುಟ್ಟಿದ್ದೇ ತಪ್ಪಾ ಎಂಬುದಾಗಿ ಮನನೊಂದು, ಕುಟುಂಬದವರೊಂದಿಗೆ ಚರ್ಚಿಸಿ, ಸ್ವಯಂ ನಿವೃತ್ತಿಯನ್ನು ಪಡೆಯಲು ಮುಂದಾಗಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
‘KSHCOEA BMS’ನಿಂದ ರಾಜ್ಯದ ಜನತೆಗೆ 70ನೇ ‘ಕನ್ನಡ ರಾಜ್ಯೋತ್ಸವ’ದ ಶುಭಾಶಯಗಳು
BIG NEWS : ಕರ್ನಾಟಕದ ಮದರಸಾಗಳಲ್ಲಿ `ಕನ್ನಡ’ ಕಲಿಸಲು ಆದ್ಯತೆ : CM ಘೋಷಣೆ
BIG BREAKING: ಕನ್ನಡ ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಾಸ್: ಸಿ.ಎಂ.ಸಿದ್ದರಾಮಯ್ಯ ಘೋಷಣೆ








