ಬೆಂಗಳೂರು: ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ( Rahul Gandhi ) ಭಾಷಣವನ್ನು ನಿದ್ದೆ ಮಾಡದೆ ಕೇವಲ 2 ನಿಮಿಷ ಕೇಳಲು ಸಾಧ್ಯವೇ ಎಂದು ಸಚಿವ ಬಿ.ಶ್ರೀರಾಮುಲು ( Minister B Sriramulu ) ಅವರು ಮಾಜಿ ಸಿಎಂ ಸಿದ್ದರಾಮಯ್ಯ ( Siddaramaiah ) ಅವರಿಗೆ ಸವಾಲು ಹಾಕಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,ಕೇವಲ ಒಂದೇ ಒಂದು ನಿಮಿಷ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಘಪರಿವಾರದ ಹೆಸರು ಹೇಳದೆ ಭಾಷಣ ಮಾಡುತ್ತೀರಾ ಎಂದು ಮತ್ತೊಂದು ಟ್ವೀಟ್ ಭಾಣ ಬಿಟ್ಟಿದ್ದಾರೆ.
ಬಹುತೇಕ ಇಡೀಕಾಂಗ್ರೆಸ್ ನಾಯಕರು ಮುಂಜಾನೆಯಿಂದ ಸಂಜೆಯವರೆಗೆ ಮೋದಿ ಅವರ ಹೆಸರುಹೇಳಿಕೊಂಡೇ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ನೀವು ಕೂಡ ಇದಕ್ಕೆ ಹೊರತಾಗಿಲ್ಲ.ಕೇವಲ 2 ನಿಮಿಷ ಮೋದಿ ಮತ್ತು ಬಿಜೆಪಿ ಹೆಸರು ಹೇಳದೆ ಭಾಷಣ ಮಾಡಲು ಸಿದ್ದರಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
BREAKING NEWS: ಓಲಾ, ಊಬರ್ಗೆ ಬಿಗ್ ರಿಲೀಫ್; ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್ ಮಧ್ಯಂತರ ತಡೆ
ನಿಮ್ಮ ನಾಮಸ್ಮರಣೆ ಮಾಡಿಕೊಂಡು ರಾಜಕೀಯ ಮಾಡಬೇಕಾದ ದರ್ದು ನಮಗಿಲ್ಲ. ಅದರ ಅಗತ್ಯವೂ ಇಲ್ಲ. ನಾವು ನಿಮ್ಮ ಹೆಸರು ಹೇಳದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಮೇಲೆ ಜನರ ಬಳಿ ಹೋಗಿ ಭಾಷಣ ಮಾಡುತ್ತೇವೆ. ಆದರೆ ನೀವು ಯಾವ ಮುಖ ಇಟ್ಟುಕೊಂಡು ಹೋಗುತ್ತೀರಿ? ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ.
ಸಿದ್ದರಾಮಯ್ಯನವರೇ SC/ST ಸಮುದಾಯಕ್ಕೆ ಮೀಸಲಾತಿ ಹೆಚ್ವಳ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಜನರ ಮುಂದೆ ಸಂತೆ ಭಾಷಣ ಮಾಡಿದೀರಿ. ಈಗ ನಮ್ಮ ಸರ್ಕಾರ ಮಾಡಿ ತೋರಿಸಿದೆ. ಅರಗಿಸಿಕೊಳ್ಳಲು ಆಗದೆ ನನ್ನ ಹೆಸರಿನ ಜಪ ಮಾಡುತ್ತಿದ್ದೀರಿ.ನನ್ಮ ಸ್ಮರಣೆ ಮಾಡುವುದರಿಂದ ನಿಮ್ಮ ರಾಜಕೀಯ ಅಸ್ತಿತ್ವ ಉಳಿಯುತ್ತದೆ ಎಂದರೆ ನನ್ನದೇನು ಅಭ್ಯಂತರವಿಲ್ಲ ಎಂದು ಸಾರಿಗೆ ಹಾಗೂ ಪರಿಶಿಷ್ಟ ಕಲ್ಯಾಣ ಖಾತೆಯ ಸಚಿವರಾಗಿರುವ ರಾಮುಲು ವ್ಯಂಗ್ಯವಾಡಿದ್ದಾರೆ.
ನನಗೆ 7 ವರ್ಷಗಳಿಂದ ಮಾತ್ರ ರಕ್ತ ಬಂದಿಲ್ಲ. ಹುಟ್ಟಿದ ದಿನದಿಂದ ಹಿಡಿದು ಈ ವರೆಗೂ ರಕ್ತ, ಶಕ್ತಿ, ಅಧಿಕಾರ ಎಲ್ಲವನ್ನೂ ಕೊಟ್ಟಿದ್ದು ನನ್ನ ಬಳ್ಳಾರಿಯ ಸ್ವಾಭಿಮಾನಿ ಜನರು. ನಾನು ನಿಮ್ಮನ್ನು ರಾಜಕೀಯಾಗಿ ಟೀಕೆ ಮಾಡುತ್ತೇನೆ ಹೊರೆತು, ನಿಮ್ಮಷ್ಟು ಕೆಳ ಮಟ್ಟಕ್ಕೆ ಇಳಿದು ಕೀಳು ಅಭಿರುಚಿತೋರಿಸಲಾರೆ.ಅದು ನನ್ನ ಗುಣವೂ ಅಲ್ಲ.
BIGG NEWS: ಹಾಸನಾಂಬೆ ದರ್ಶನಕ್ಕೆ ಮಳೆರಾಯ ಅಡ್ಡಿ; ಭಕ್ತರ ಸಂಖ್ಯೆ ಗಣನೀಯ ಇಳಿಕೆ
ನನ್ನನ್ನು ಪ್ರಶ್ನೆ ಮಾಡುವ ಮೊದಲು SC/ ST ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬುದು ದಶಕಗಳ ಬೇಡಿಕೆ. ದೇವರಾಜ್ ಅರಸ್ ನಂತರ, ನಾನೇ ಯಶಸ್ವಿ ಸಿ.ಎಂ ಎಂದು ನಿಮ್ಮ ಹಿಂಬಾಲಕರಿಂದ ಜೈಕಾರ ಹಾಕಿಸಿಕೊಳ್ಳುವ ನಿಮಗೆ ಈ ಎರಡು ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕು ಎಂಬು ಆಲೋಚನೆ ಇರಲಿಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.
ಎಷ್ಟೇ ಆದರೂ ನೀವು ಹುಲಿಯಾ, ಟಗರು ಬಿರುದುಬಾವಲಿಗಳನ್ನು ಹೊಂದಿದವರು.ನನ್ನ ರಕ್ತದ ಬಗ್ಗೆ ಕೇಳುವ ಮೊದಲು, 5 ವರ್ಷ ಸಿಎಂ ಆಗಿದ್ದಾಗ, ನಿಮ್ಮ ರಕ್ತ ಯಾವ ಬಿಲ ಸೇರಿತ್ತು ಎಂಬುದನ್ನು ಜನತೆಯ ಮುಂದೆ ಸ್ವಲ್ಪ ಹೇಳಿದ್ದರೆ ನಿಮ್ಮ ಘನತೆಗೊಂದು ತೂಕ ಇರುತ್ತಿತ್ತು.ರಾಜಕೀಯ ಟೀಕೆಗಳನ್ನು ವೈಯಕ್ತಿಕ ಹಂತಕ್ಕೆಕೊಂಡುಯ್ದ ಕುಖ್ಯಾತಿ ನಿಮಗೆ ಸಲ್ಲಬೇಕು ಎಂದು ಟ್ವೀಟರ್ ನಲ್ಲಿ ಸಿದ್ದರಾಮಯ್ಯನವರ ಆರೋಪಕ್ಕೆ ಟಕ್ಕರ್ ಕೊಟ್ಟಿದ್ದಾರೆ.
2018 ರ ವಿಧಾನಸಭೆ ಚುನಾವಣೆಯಲ್ಲಿ ನಾನು ನಮ್ಮ ಪಕ್ಷದ ನಾಯಕರು ಇನ್ನೊಂದು ಬಾರಿ ಬಾದಾಮಿಯಲ್ಲಿ ಪ್ರಚಾರ ನಡೆಸಿದ್ದರೆ 5 ವರ್ಷ ನಿಮ್ಮನ್ನು ಕೇಳುವವರೇ ಇಲ್ಲದಂತೆ ಆಗುತ್ತಿತ್ತು. ತಿಣಕಾಡಿ ಒಂದು ಸಾವಿರ ಚಿಲ್ಲರೆ ಮತಗಳಿಂದ ಗೆದ್ದಿದ್ದರೂ ದುರಂಹಕಾರ ಮಾತ್ರ ನಿಂತಿಲ್ಲ.ಮುಂದಿದೆ ಮಾರಿಹಬ್ಬ! ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ನಾನು ನಿಮಗಿಂತಲೂ ಕೆಳಮಟ್ಟದ ಭಾಷೆಯಲ್ಲಿ ಟೀಕಿಸಬಲ್ಲೆ. ಆದರೆ ಅದು ನನ್ನ ಸಂಸ್ಕೃತಿಯಲ್ಲ. ಒಬ್ಬರನ್ನು ಟೀಕೆ ಮಾಡುವಾಗಲೂ ಸೌಜನ್ಯದ ಎಲ್ಲೆಯನ್ನು ಮೀರಬಾರದು ಎಂದು ಹೇಳಿಕೊಟ್ಟಿದ್ದು ಬಿಜೆಪಿ ಮತ್ತು ಸಂಘಪರಿವಾರ.ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿದ್ದೇನೆ ಎಂದು ರಾಮುಲು ಎಂದು ಹೇಳಿದ್ದಾರೆ.
ಬಿಜೆಪಿಗೆ ಪಾದಯಾತ್ರೆ ಅಥವಾ ಹೋರಾಟ ನಡೆಸುವುದು ಹೊಸತೇನಲ್ಲ. ಬೀದರ್ ನಿಂದ ಚಾಮರಾಜನಗರ, ಮಂಗಳೂರಿನಿಂದಕೋಲಾರದವರೆಗೆ ಬೀದಿಯಲ್ಲಿ ನಿಂತೇ ಪಕ್ಷವನ್ನು ಸಂಘಟಿಸಿದ್ದೇವೆ. 10 ಸಾವಿರ ಬೆಲೆ ಬಾಳುವ ಶೂ, 1 ಕೋಟಿ ಮೌಲ್ಯದ ಹೋಬ್ಲೋಟ್ ವಾಚ್ , ಲಕ್ಷ ಬೆಲೆಯ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಪಾದಯಾತ್ರೆ ನಡೆಸುವವರು ನಾವಲ್ಲ ಎಂದು ಟೀಕಿಸಿದ್ದಾರೆ.
ನಿಮ್ಮ ವಿಫಲ ನಾಯಕ ರಾಹುಲ್ ಗಾಂಧಿಯವರ ಜೊತೆಗೆ ಮೂರು ಹೆಜ್ಜೆ ಹಾಕಲು ಆಗದೆ, ಕಣ್ ಕಣ್ ಬಿಡುತ್ತಿದ್ದಾಗ ಬಲವಂತವಾಗಿ ಕೈ ಹಿಡಿದುಕೊಂಡು ಓಡೋಡಿ ಹೋಗಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದು ಯಾರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಆಗದಿದ್ದರೂ, ಅಸ್ತಿತ್ವಉಳಿಸಿಕೊಳ್ಳಲು ಹೆಣಗಾಟ ನಡೆಸುತ್ತಿರುವವರು ನಾವು ನೀವಾ.? ಎಂದು ಟ್ವೀಟರ್ ನಲ್ಲಿ ರಾಮುಲು ಅವರು ಬೆಂಕಿ ಉಗುಳಿದ್ದಾರೆ.