ಮೈಸೂರು : ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿಯ ಈ ಖ್ಯಾತಿಯಿಂದಾಗಿ ಮೈಸೂರಿನ ಚಾಮುಂಡೇಶ್ವರಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಧೋನಿಯ ಮೇಣದ ಪ್ರತಿಮೆಯನ್ನ ರಚಿಸಲಾಗಿದೆ. ಆದ್ರೆ, ಈ ಪ್ರತಿಮೆ ಕಂಡ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಧೋನಿಯ ಈ ಮೇಣದ ಆಕೃತಿಯು ಆಕಾರದಲ್ಲಿ ತಪ್ಪಾಗಿದ್ದು, ಧೋನಿಯಂತೆ ಕಾಣುತ್ತಿಲ್ಲ ಎಂದು ಅಭಿಮಾನಿಗಳು ಮ್ಯೂಸಿಯಂ ಮತ್ತು ಪ್ರತಿಮೆಯ ಸೃಷ್ಟಿಕರ್ತನನ್ನ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಇನ್ನು ಮೀಮ್ಸ್ ಮಾಡಲು ಪ್ರಾರಂಭಿಸಿದ್ದು, ಈ ಕೆಲವು ತಮಾಷೆಯ ಮೇಮ್ಗಳಿಳು ಮುಂದಿವೆ.
Looks like wax statue of ranbir playing MS Dhoni role https://t.co/gsMz9JjKBS
— SSMSD (@raajuprince) October 7, 2022
Abey ye Dhoni ka wax statue hai ya Shoaib Malik ka😡 https://t.co/httv6WPzqv
— 🇮🇳 Loknath Palauri (@lokipalauri) October 7, 2022
PS: Dhoni wax statue pic.twitter.com/Auqg9Sg1AO
— мя.ταℓℓυяι♕ (@Babufanraluchaa) October 7, 2022
MS Dhoni's wax statue. Unbelievable resemblance 😐 pic.twitter.com/0ihyDfSScj
— Cricketopia (@CricketopiaCom) October 7, 2022
ಧೋನಿ ಅಂತರಾಷ್ಟ್ರೀಯ ವೃತ್ತಿಜೀವನ
ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿಜೀವನದಲ್ಲಿ 90 ಟೆಸ್ಟ್, 350 ODI ಮತ್ತು 98 T20I ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ಪಂದ್ಯಗಳಲ್ಲಿ 6 ಶತಕ, ಒಂದು ದ್ವಿಶತಕ, 33 ಅರ್ಧಶತಕಗಳನ್ನ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್’ನಲ್ಲಿ ಒಟ್ಟು 4 ಸಾವಿರದ 876 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ ಒಟ್ಟು 10 ಸಾವಿರದ 773 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ, 79 ಅರ್ಧಶತಕಗಳು ಸೇರಿವೆ. ಹಾಗಾಗಿ ಟಿ20 ಕ್ರಿಕೆಟ್ ನಲ್ಲಿ ಒಟ್ಟು 1 ಸಾವಿರದ 617 ರನ್ ಗಳಿಸಿದ್ದಾರೆ. ಧೋನಿ 190 ಐಪಿಎಲ್ ಪಂದ್ಯಗಳನ್ನ ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 4 ಸಾವಿರದ 432 ರನ್ ಗಳಿಸಿದ್ದಾರೆ.