ಇರಾನ್: ಇರಾನ್ನಲ್ಲಿ ಇನ್ನೂ ಹಿಜಾಬ್ ಪ್ರತಿಭಟನೆಗಳು ಮುಂದುವರೆಯುತ್ತಲೇ ಇವೆ. ಈ ನಡುವೆ ತನ್ನ ತಲೆಯ ಸ್ಕಾರ್ಫ್ ತೆಗೆದು, ಮುಡಿ ಕಟ್ಟಿದ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಇರಾನ್ನ ನಟಿಯೋರ್ವಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಅಲ್ಲಿನ ರಾಜ್ಯ ಮಾಧ್ಯಮ ಭಾನುವಾರ ವರದಿ ಮಾಡಿದೆ.
52 ವರ್ಷದ ಇರಾನ್ ನಟಿ ಹೆಂಗಮೆಹ್ ಘಜಿಯಾನಿ (Hengameh Ghaziani) ತನ್ನ ತಲೆಯ ಸ್ಕಾರ್ಫ್ ತೆಗೆದು, ಮುಡಿ ಕಟ್ಟಿದ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಗಲಭೆಯನ್ನು ಪ್ರಚೋದಿಸಿದ ಆರೋಪದ ಮೇಲೆ ಘಜಿಯಾನಿಯನ್ನು ಬಂಧಿಸಲಾಗಿದೆ.
View this post on Instagram
ವಿಡಿಯೋ ಪೋಸ್ಟ್ ಮಾಡಿದ ಒಂದು ದಿನದ ನಂತ್ರ ಘಜಿಯಾನಿಯನ್ನು ಅರೆಸ್ಟ್ ಮಾಡಲಾಗಿದ್ದು, “ಬಹುಶಃ ಇದು ನನ್ನ ಕೊನೆಯ ಪೋಸ್ಟ್ ಆಗಿರಬಹುದು. ಈ ಕ್ಷಣದಿಂದ ನನಗೆ ಏನೇ ಸಂಭವಿಸಿದರೂ, ನಾನು ಯಾವಾಗಲೂ ಇರಾನ್ ಜನರೊಂದಿಗೆ ನನ್ನ ಕೊನೆಯ ಉಸಿರು ಇರುವವರೆಗೂ ಇರುತ್ತೇನೆ ಎಂದು ತಿಳಿಯಿರಿ.”
ಎಂದು ಘಜಿಯಾನಿ ಶನಿವಾರ ಬರೆದುಕೊಂಡಿದ್ದಾರೆ.
ಟೆಹ್ರಾನ್ನಲ್ಲಿ ನೈತಿಕತೆಯ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಕುರ್ದಿಷ್ ಮೂಲದ 22 ವರ್ಷದ ಮಹಿಳೆ ಮಹ್ಸಾ ಅಮಿನಿಯ ಕಸ್ಟಡಿಯಲ್ಲಿ ಸಾವನ್ನಪ್ಪಿದರು. ಅಂದಿನಿಂದ ಇರಾನ್ನಲ್ಲಿ ಹಿಜಾಬ್ ಪ್ರತಿಭಟನೆಗೆ ಅದೆಷ್ಟೋ ಮಂದಿ ಬಲಿಯಾಗಿದ್ದಾರೆ.
ಪುಣೆ: ಬ್ರೇಕ್ ಫೇಲ್ ಆಗಿ 40ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿಯೊಡೆದ ಟ್ಯಾಂಕರ್, 30 ಮಂದಿಗೆ ಗಾಯ
Budget 2023-24: ಇಂದಿನಿಂದ ತಜ್ಞರೊಂದಿಗೆ ʻಬಜೆಟ್ ಪೂರ್ವ ಸಮಾಲೋಚನೆʼ ನಡೆಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಪುಣೆ: ಬ್ರೇಕ್ ಫೇಲ್ ಆಗಿ 40ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿಯೊಡೆದ ಟ್ಯಾಂಕರ್, 30 ಮಂದಿಗೆ ಗಾಯ