ಪ್ಯಾರಿಸ್: ಇರಾನ್ನಲ್ಲಿ ಆಕ್ಷೇಪಾರ್ಹ ಉಡುಪು ಧರಿಸಿದ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಯುವತಿ ಸಾವನ್ನಪ್ಪಿದ ಬಳಿಕ ಪ್ರತಿಭಟನೆಗಳು ಮತ್ತಷ್ಟು ಸ್ಫೋಟಗೊಂಡಿದೆ. ಇರಾನ್ ಶಾಲಾ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ತಮ್ಮ ಹಿಜಾಬ್ಗಳನ್ನು ತೆಗೆದುಹಾಕಿ , ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ರ್ಯಾಲಿಗಳನ್ನು ನಡೆಸುತ್ತಿದ್ದಾರೆ.
ಇಸ್ಲಾಮಿಕ್ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು, ಇರಾನಿನ ಕುರ್ದ್ನನ್ನು ಕಳೆದ ತಿಂಗಳು 22 ವರ್ಷದ ಯುವತಿ ಮಹ್ಸಾ ಅಮಿನಿ ಎಂಬುವವರನ್ನು ಬಂಧಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಯುವತಿ ಸಾವನ್ನಪ್ಪಿದ್ದಳು. ಇದರಿಂದ ಇರಾನ್ ನಲ್ಲಿ ಪ್ರತಿಭಟನೆಗಳು ಭಗಿಲೆದ್ದಿವೆ. ಸುಮಾರು ಮೂರು ವರ್ಷಗಳಲ್ಲಿ ಇರಾನ್ ನಡೆಯುತ್ತಿರುವ ದೊಡ್ಡ ಪ್ರತಿಭಟನೆಯ ಅಲೆಯಾಗಿ ಹರಡಿದೆ.
ಟೆಹ್ರಾನ್ನ ಪ್ರತಿಷ್ಠಿತ ಷರೀಫ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಭೂಗತ ಕಾರ್ ಪಾರ್ಕ್ನಲ್ಲಿ ವಿದ್ಯಾರ್ಥಿಗಳು ರ್ಯಾಲಿ ನಡೆಸಿದರು. ಶಾಲಾ ವಿದ್ಯಾರ್ಥಿನಿಯರು ದೇಶಾದ್ಯಂತ ಲಾಠಿ ಹಿಡಿದು, ತಮ್ಮ ಹಿಜಾಬ್ಗಳನ್ನು ತೆಗೆದು, ಆಡಳಿತ ವಿರೋಧಿ ಘೋಷಣೆಗಳನ್ನು ಕೂಗಿದರು. ಪುರೋಹಿತಶಾಹಿ ರಾಜ್ಯದ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿದ್ದಾರೆ.
ಮಹಿಳೆಯರ ನೇತೃತ್ವದ ಪ್ರತಿಭಟನೆಗಳು ನಾಲ್ಕನೇ ವಾರಕ್ಕೆ ವಿಸ್ತರಿಸುತ್ತಿದ್ದಂತೆ, ಇರಾನ್ ತನ್ನ ದಮನಕಾರಿ ನೀತಿಯನ್ನು ವಿಸ್ತರಿಸಿದೆ. ಚಳವಳಿಯ ಉನ್ನತ ಬೆಂಬಲಿಗರನ್ನು ಬಂಧಿಸಿದ್ದು, ಇಂಟರ್ನೆಟ್ ನಿರ್ಬಂಧಗಳನ್ನು ವಿಧಿಸಿದೆ.
ಮಂಗಳವಾರ ರಾತ್ರಿ, ಪ್ರತಿಭಟನೆಯನ್ನು ಬೆಂಬಲಿಸಿ ಅವರ ಹಾಡು ವೈರಲ್ ಆಗಿದ್ದು, ಮತ್ತು ಚಳವಳಿಗೆ ಗೀತೆಯಾದ ನಂತರ ಬಂಧಿಸಲ್ಪಟ್ಟ ಇರಾನ್ ಪಾಪ್ ಗಾಯಕ ಶಿರ್ವಿನ್ ಹಾಜಿಪೂರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಓಸ್ಲೋ ಮೂಲದ ಗುಂಪು ಇರಾನ್ ಮಾನವ ಹಕ್ಕುಗಳ (IHR) ಪ್ರಕಾರ, ಅಶಾಂತಿಯಲ್ಲಿ ಇದುವರೆಗೆ ಕನಿಷ್ಠ 92 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ.
ಅಮ್ನೆಸ್ಟಿ ಇಂಟರ್ನ್ಯಾಶನಲ್ 53 ಸಾವುಗಳನ್ನು ದೃಢಪಡಿಸಿದೆ. ಆದರೆ ಫಾರ್ಸ್ ಸುದ್ದಿ ಸಂಸ್ಥೆ ಕಳೆದ ವಾರ ಸಾವಿನ ಸಂಖ್ಯೆಯನ್ನು ಸುಮಾರು 60 ಎಂದು ಹೇಳಿದೆ. ಭದ್ರತಾ ಪಡೆಗಳ ಕನಿಷ್ಠ 12 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.