ಬೆಂಗಳೂರು: ಹಲವು ವರ್ಷಗಳಿಂದ ಉತ್ಸಾಹಿ ಯುವ ಲೇಖಕರನ್ನು ಬರಹದ ಮೂಲಕ ಪ್ರೋತ್ಸಾಹಿಸುವಂತ ಕೆಲಸವನ್ನು ಪಂಜು ಆನ್ ಲೈನ್ ಪತ್ರಿಕೆ ಮಾಡುತ್ತಿದೆ. ಇದೀಗ ಯುವ ಲೇಖಕರನ್ನು ಗುರ್ತಿಸಿ, ಹುರುಪು ತುಂಬುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ. ಅದೇ ಪಂಜು ಕಥಾಸಂಕಲನ ಪ್ರಶಸ್ತಿಯನ್ನು ನೀಡೋದಕ್ಕೆ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಲೇಖಕರಿಂದ ಕಥಾಸಂಕಲನವನ್ನು ಆಹ್ವಾನಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿರುವಂತ ಪಂಜು ಬಳಗವು ( https://panjumagazine.com/ ), ಪಂಜು 2023 ರ ಜನವರಿಯಲ್ಲಿ ಹತ್ತು ವರ್ಷ ಪೂರೈಸುತ್ತದೆ. ದಶಕದ ಮೈಲಿಗಲ್ಲು ತುಳಿದ ಬೆರಳೆಣಿಕೆಯ ಕನ್ನಡದ ಅಂತರ್ಜಾಲ ಪತ್ರಿಕೆಗಳಲ್ಲಿ ಪಂಜು ಕೂಡ ಒಂದು. ದಶಕದ ಈ ಸಂಭ್ರಮವನ್ನು ಆಚರಿಸಲು ಪಂಜು ಮೊದಲ ಹೆಜ್ಜೆಯಾಗಿ ಕಥಾಸಂಕಲನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸುತ್ತಿದೆ ಎಂದು ತಿಳಿಸಿದೆ.
2021 ರ ಸಾಲಿನಲ್ಲಿ ಅಂದರೆ ಜನವರಿ 2021 ರಿಂದ ಡಿಸೆಂಬರ್ 2021 ರವರೆಗೆ ಪ್ರಕಟವಾಗಿರುವ ಮೊದಲ ಮುದ್ರಣದ ಕಥಾಸಂಕಲನಗಳನ್ನು ಪಂಜುವಿಗಾಗಿ ಕಳುಹಿಸಿಕೊಡಿ. ನಮಗೆ ಬಂದ ಕೃತಿಗಳಲ್ಲಿನ ಅತ್ಯುತ್ತಮವಾದ ಕಥಾಸಂಕಲನವೊಂದಕ್ಕೆ ರೂ. 10,000/- ನಗದು ಬಹುಮಾನವನ್ನು ನೀಡಲಾಗುವುದು ಎಂದು ಹೇಳಿದೆ.
ಕಥಾಸಂಕಲನ ಕಳುಹಿಸಿಕೊಡಬೇಕಾದಂತ ವಿಳಾಸ
Gagan Chakravarthi C
Regional Research Office
Animal Disease Diagnosis Laboratory
IAH & VB
Veterinary Hospital Compound
Kolar Pin-563101
Phone: 9844332505
ಇನ್ನೂ ಲೇಖಕರು ಕಥಾಸಂಕಲನ ಕಳುಹಿಸಲು ಕೊನೆಯ ದಿನಾಂಕ: 25 ಆಗಸ್ಟ್ 2022 ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://panjumagazine.com/ ಜಾಲತಾಣಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ.