ದೆಹಲಿ: ಇಂದಿನ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳು, ಆಟಗಳ ಪರಿಚಯವೇ ಇಲ್ಲ. ಸ್ವಲ್ಪ ಸಮಯ ಸಿಕ್ಕರೂ ಮೊಬೈಲ್, ಲ್ಯಾಪ್ಟಾಪ್ನೊಂದಿಗೆ ಕಾಲ ಕಳೆಯುತ್ತಾರೆ. ಇದು ಎಲ್ಲಾ ಹೆತ್ತವರ ಅಳಲು. ಇಂಥಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಾಲೆಗಳಲ್ಲಿ ಗ್ರಾಮೀಣ ಆಗಳನ್ನು ಕಲಿಸಿಕೊಟ್ಟರೆ ಹೇಗಿರುತ್ತದೆ?.
ಹೌದು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಕರ್ನಾಟಕ ಹಾಗೂ ಒಡಿಶಾದ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಗಿಲ್ಲಿ ದಾಂಡು(ಚಿನ್ನಿ ದಾಂಡು) ಸೇರಿದಂತೆ ಒಟ್ಟು 75 ʻಭಾರತೀಯ ಆಟʼಗಳನ್ನು ಶಾಲೆಗಳಲ್ಲಿ ಕಲಿಸಿಕೊಡುವ ಘೋಷಣೆ ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ʻರಾಷ್ಟ್ರೀಯ ಶಿಕ್ಷಣ ನೀತಿʼ ಅನುಷ್ಠಾನದ 2ನೇ ವರ್ಷಾಚರಣೆ ಹಿನ್ನಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಶಿಕ್ಷಣ ಸಚಿವಾಲಯದ ಜ್ಞಾನ ವ್ಯವಸ್ಥೆ(ಎಸ್ಕೆಎಸ್) ಯಡಿ ಇದನ್ನು ಜಾರಿಗೆ ತರಲಾಗಿದೆ.
ಏನಿದು ದೇಸಿ ಕ್ರೀಡೆಗಳು?
ಈ ಯೋಜನೆಯಂತೆ, ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಆಟಗಳನ್ನು ಶಾಲೆಯಲ್ಲಿ ಪರಿಚಯಿಸಲಾಗುತ್ತದೆ. ಅವುಗಳಲ್ಲಿ ಗಿಲ್ಲಿದಾಂಡು, ಕಬ್ಬಡಿ, ಪಗಡಿ ಪಾಟ್(ಲೂಡೋ ಮಾದರಿ ಆಟ), ರಾಜಾ ಮಂತ್ರಿ ಚೋರ್ ಸಿಪಾಯಿ, ಪೋಷಂ ಪಾ, ಯುಬಿ ಲಕ್ಷಿ(ರಗ್ಬಿ ಮಾದರಿ ಆಟ), ಕಂಚೆ, ಲಾಂಗ್ಡಿ, ಜಾವೆಲಿನ್ ಎಸೆತ, ಗಾಳಿಪಟ ಹಾರಿಸುವುದು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 75 ಆಟಗಳನ್ನು ʻದೇಸಿ ಕ್ರೀಡೆಗಳುʼ ಪಟ್ಟಿಗೆ ಸೇರಿಸಲಾಗಿದೆ.
ಇದರ ಉದ್ದೇಶವೇನು?
ಶಾಲೆಗಳಲ್ಲಿ ಭಾರತೀಯ ಕ್ರೀಡೆಗಳಿಗೆ ಉತ್ತೇಜನ ನೀಡುವುದು ಮಾತ್ರವಲ್ಲ ಶಾಲಾ ಮಟ್ಟದಲ್ಲೇ ಕ್ರೀಡೆಗಳು ಒಳಗೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಐಕೆಎಸ್ ರಾಷ್ಟ್ರೀಯ ಸಮನ್ವಯಕಾರ ಗಾಂಥಿ ಎಸ್. ಮೂರ್ತಿ ಹೇಳಿದ್ದಾರೆ.
ಗ್ರಾಮೀಣ ಶಾಲೆಗಳಲ್ಲಿ ಬಾಸ್ಕೆಟ್ ಬಾಲ್, ಬ್ಯಾಡ್ಮಿಟನ್ನಂತಹ ಆಟಗಳಿಗೆ ಬೇಆದ ಸೌಲಭ್ಯವಿಲ್ಲ. ಹೀಗಾಗಿ, ಅಂಥ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಮೂಲಕ ಸ್ಥಳೀಯ ಆಟ ಪರಿಚಯಿಸಲು ನಿರ್ಧರಿಸಿದ್ದೇವೆ. ಅವುಗಳು ಹೆಚ್ಚು ಸೃಜನಾತ್ಮಕವಾಗಿದ್ದು, ದೇಶದ ಸಂಸ್ಕೃತಿಯೊಂದಿಗೆ ನಂಟು ಹೊಂದಿರುತ್ತವೆ ಎಂದು ಅವರು ಹೇಳಿದ್ದಾರೆ.
BREAKING NEWS: : LPG’ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 36 ರೂ. ಇಳಿಕೆ | Commercial LPG cylinder price cut
Watch Video: ಹೈದರಾಬಾದ್ನಲ್ಲಿ ಭಾರೀ ಮಳೆಗೆ ತೇಲಿ ಹೋದ ʻಬಿರಿಯಾನಿ ಪಾತ್ರೆʼ!