Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಎಲ್‌ಪಿಜಿ ದರ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ

​ದುಃಖದಲ್ಲಿರುವಾಗ ಕಣ್ಣೀರು ಹಾಕಿಸುವ ಹಾಡುಗಳು ಏಕೆ ಹೆಚ್ಚು ಆಪ್ತವಾಗುತ್ತವೆ? ವಿಜ್ಞಾನ ಹೇಳುವುದೇನು?

ರಾಜ್ಯದಲ್ಲಿ ರೌಡಿಸಂ ಮಟ್ಟಹಾಕಲು ಸರ್ಕಾರ ಬಿಗ್ ಆ್ಯಕ್ಷನ್: ಪ್ರತಿ ಠಾಣಾ ಮಟ್ಟದಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ : `ಯೋಗ’ ಮಾಡುವಾಗ ಈ ಮಾರ್ಗದರ್ಶನಗಳ ಪಾಲನೆ ಕಡ್ಡಾಯ | International Yoga Day
KARNATAKA

ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ : `ಯೋಗ’ ಮಾಡುವಾಗ ಈ ಮಾರ್ಗದರ್ಶನಗಳ ಪಾಲನೆ ಕಡ್ಡಾಯ | International Yoga Day

By kannadanewsnow57

ಯೋಗಾಭ್ಯಾಸಕ್ಕೆ ಸಾಮಾನ್ಯ ಮಾರ್ಗದರ್ಶನಗಳು, ಯೋಗವನ್ನು ಅಭ್ಯಾಸ ಮಾಡುವಾಗ ಈ ಕೆಳಗೆ ನೀಡಲಾಗಿರುವ ಮಾರ್ಗದರ್ಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಅಭ್ಯಾಸದ ಮೊದಲು

ಶುಚಿತ್ವವು ಯೋಗವನ್ನು ಅಭ್ಯಾಸ ಮಾಡಲು ಬೇಕಾದ ಪ್ರಮುಖ ಅಗತ್ಯತೆ. ಇದು ಸುತ್ತಮುತ್ತಲಿನ ಪರಿಸರ, ದೇಹ ಮತ್ತು ಮನಸ್ಸಿನ ಶುದ್ಧಿಯನ್ನು ಒಳಗೊಂಡಿರುತ್ತದೆ.
ಯೋಗಾಭ್ಯಾಸವನ್ನು ಮಾಡುವಾಗ ಖಾಲಿ ಹೊಟ್ಟೆಯಲ್ಲಿ ಇರುವುದು ಉತ್ತಮ. ಲಘುವಾದ ಆಹಾರವನ್ನು ಸೇವಿಸಬಹುದು. ಸುಸ್ತು ಅನಿಸಿದಲ್ಲಿ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ

ಜೇನುತುಪ್ಪನವನ್ನು ಸೇರಿಸಿ ಸೇವಿಸಬಹುದು.

ಮಲ ಮೂತ್ರಗಳ ವಿಸರ್ಜನೆ ಮುಗಿಸಿದ ನಂತರ ಯೋಗಾಭ್ಯಾಸವನ್ನು ಮಾಡಬೇಕು.

ಅಭ್ಯಾಸಕ್ಕಾಗಿ ಯೋಗ ಮ್ಯಾಟ್ ಅಥವಾ ಬೆಡ್ಶೀಟ್ ಬಳಸಬಹುದು.

ಹಗುರವಾದ ಮತ್ತು ಆರಾಮದಾಯಕವಾದ ಹತ್ತಿಯ ಉಡುಪುಗಳನ್ನು ಧರಿಸುವುದರಿಂದ ಯೋಗವನ್ನು ಅಭ್ಯಾಸ ಮಾಡಲು ಸುಲಭವಾಗುತ್ತದೆ.
ಅವಸರವಾಗಿ ಯೋಗವನ್ನು ಅಭ್ಯಾಸ ಮಾಡಬಾರದು.

ದೀರ್ಘಕಾಲದ ಕಾಯಿಲೆ /ನೋವು/ಹೃದಯದ ಸಮಸ್ಯೆಗಳು/ಆಯಾಸ ಮತ್ತು ತೀವ್ರವಾದ ಒತ್ತಡ ಇದ್ದಲ್ಲಿ ಅಭ್ಯಾಸವನ್ನು ಮಾಡುವ ಮೊದಲು ವೈದ್ಯರ ಮತ್ತು ಯೋಗ ಶಿಕ್ಷಕರ ಸಲಹೆಯನ್ನು ಪಡೆಯಬೇಕು.

ಗರ್ಭಿಣಿಯರು, ಬಾಣಂತಿಯರು ಮತ್ತು ಮುಟ್ಟಿನ ಸಮಯದಲ್ಲಿ ಯೋಗವನ್ನು ಅಭ್ಯಾಸ ಮಾಡುವ ಮೊದಲು ತಜ್ಞರ ಸಲಹೆಯನ್ನು ಪಡೆಯಬೇಕು.
ಅಭ್ಯಾಸದ ಸಮಯದಲ್ಲಿ

ಯೋಗದ ಅಭ್ಯಾಸವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಬೇಕು. ಇದು ಮನಸ್ಸನ್ನು ಶಾಂತವಾಗಿ ಇಡಲು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ಯೋಗಾಭ್ಯಾಸಗಳನ್ನು ನಿಧಾನವಾಗಿ, ಶಾಂತವಾದ ಸ್ಥಿತಿಯಲ್ಲಿ, ದೇಹದ ಚಲನೆ ಮತ್ತು ಉಸಿರಾಟದ ಗತಿಯನ್ನು ಗಮನಿಸುತ್ತಾ ಮಾಡಬೇಕು.

ಅಭ್ಯಾಸದ ಸಮಯದಲ್ಲಿ, ನಿರ್ದಿಷ್ಟವಾಗಿ ಹೇಳಿರುವ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಉರಿಸನ್ನು ಹಿಡಿದಿರಬಾರದು.
◆ ನಿರ್ದಿಷ್ಟವಾಗಿ ಹೇಳಿರುವ ಸಂದರ್ಭಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಉಸಿರಾಟವು ಯಾವಾಗಲೂ ಮೂಗಿನ ಹೊಳ್ಳೆಗಳ ಮೂಲಕ 2. Harmony & Peace ದೇಹವನ್ನು ಬಿಗಿಯಾಗಿ ಹಿಡಿದುಕೊಳ್ಳಬಾರದು ಮತ್ತು ಅನಗತ್ಯ ಎಳೆತಗಳನ್ನು ನೀಡಬಾರದು.

ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಗವನ್ನು ಅಭ್ಯಾಸ ಮಾಡಬೇಕು. ಕೆಲವೊಮ್ಮೆ ಧನಾತ್ಮಕ ಪರಿಣಾಮಗಳನ್ನು ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ನಿರಂತರ ಮತ್ತು ನಿಯಮಿತ ಅಭ್ಯಾಸ ಬಹಳ ಅವಶ್ಯಕ.

ಪ್ರತಿಯೊಂದು ಆಸನವೂ ನಿರ್ದಿಷ್ಟ ಸಲಹೆ ಹಾಗೂ ಮಿತಿಗಳನ್ನು ಹೊಂದಿದ್ದು ಅಭ್ಯಾಸದ ಸಮಯದಲ್ಲಿ ಇವುಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.
ಯೋಗಾಭ್ಯಾಸವನ್ನು ಶಾಂತಿಮಂತ್ರ/ಸಂಕಲ್ಪ ಅಥವಾ ಧ್ಯಾನದೊಂದಿಗೆ ಕೊನೆಗೊಳಿಸಬೇಕು.

ಅಭ್ಯಾಸದ ನಂತರ

ಯೋಗಾಭ್ಯಾಸದ ನಂತರ ನಿಧಾನವಾಗಿ ಚೇತರಿಸಿಕೊಂಡು ದೈನಂದಿನ ಕೆಲಸಗಳನ್ನು ಮಾಡಬೇಕು.

ಯೋಗಾಭ್ಯಾಸದ 20 ರಿಂದ 30 ನಿಮಿಷಗಳ ನಂತರ ಸ್ನಾನವನ್ನು ಮಾಡಬಹುದು.

ಯೋಗಾಭ್ಯಾಸದ 20 ರಿಂದ 30 ನಿಮಿಷಗಳ ನಂತರವೇ ಆಹಾರವನ್ನು ಸೇವಿಸಬಹುದು.

ಆಹಾರದ ನಿಯಮಗಳು

ಕೆಲವೊಂದು ಆಹಾರ ಸೇವನೆಯ ಅಭ್ಯಾಸಗಳು ದೇಹ ಮತ್ತು ಮನಸ್ಸನ್ನು ಯೋಗಾಭ್ಯಾಸಕ್ಕೆ ಉತ್ತಮವಾಗಿ ಹೊಂದಿಕೊಳ್ಳಲು ಸಹಕಾರಿಯಾಗಿವೆ. ಸಾಮಾನ್ಯವಾಗಿ ಸಸ್ಯಾಹಾರವು ಸೂಕ್ತವಾಗಿದೆ. ಅನಾರೋಗ್ಯ ಪೀಡಿತರಲ್ಲಿ ಅಥವಾ ಹೆಚ್ಚಿನ ದೈಹಿಕ ಚಟುವಟಿಕೆ ಮಾಡುವವರನ್ನು ಹೊರತುಪಡಿಸಿ 30 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ದಿನಕ್ಕೆ ಎರಡೇ ಹೊತ್ತು ಆಹಾರ ಸೇವನೆಯು ಪ್ರಶಸ್ತವಾಗಿದೆ.
ಯೋಗಾಭ್ಯಾಸದ ಪ್ರಯೋಜನಗಳು:

ಯೋಗವು ಎಲ್ಲಾ ಬಂಧನಗಳಿಂದ ಮುಕ್ತವಾಗಲು ಒಂದು ಮಾರ್ಗವಾಗಿದೆ. ಪ್ರಾಚೀನ ಕಾಲದಿಂದಲೂ ಹಲವಾರು ಯೋಗ ಸಾಧಕರ ಅನುಭವಗಳ ಆಧಾರದ ಮೇಲೆ ಹಾಗೂ ಇತ್ತೀಚಿನ ದಿನಗಳಲ್ಲಿ ಯೋಗದ ಹಲವಾರು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ವೈಜ್ಞಾನಿಕವಾಗಿ ದೃಢಪಡಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ.

ಯೋಗವು ದೈಹಿಕ ಸಾಮರ್ಥ್ಯ, ಮಾಂಸಖಂಡ ಮತ್ತು ಮೂಳೆಗಳ ದೃಢತೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯಕಾರಿ.

ಮಾನಸಿಕ ಖಿನ್ನತೆ, ಆಯಾಸ, ಆತಂಕ ಮುಂತಾದ ಸಮಸ್ಯೆಗಳ ನಿವಾರಣೆಗೆ ಯೋಗವು ಸಹಕಾರಿಯಾಗಿದೆ.
ಮಧುಮೇಹ, ಉಸಿರಾಟದ ತೊಂದರೆ, ಅಲರ್ಜಿ, ಅಧಿಕ ರಕ್ತದೊತ್ತಡ, ಮತ್ತು ಜೀವನಶೈಲಿಗೆ ಸಂಬಂಧಿಸಿದ ಅನೇಕ ರೋಗಗಳ ನಿರ್ವಹಣೆಯಲ್ಲಿ ಇದು ಪ್ರಯೋಜನಕಾರಿಯಾಗಿದೆ.

ಮುಟ್ಟಿನ ಮತ್ತು ಮುಟ್ಟು ನಿಲ್ಲುತ್ತಿರುವ ಸಂದರ್ಭದ ಸಮಸ್ಯೆಗಳನ್ನು ನಿಯಂತ್ರಿಸಲು ಯೋಗ ಸಹಾಯ ಮಾಡುತ್ತದೆ.

ಮುಖ್ಯವಾಗಿ ಯೋಗವು ದೇಹ ಮತ್ತು ಮನಸ್ಸಿನ ಅಡೆತಡೆಗಳನ್ನು ನಿವಾರಿಸಿ ಉತ್ಸಾಹಭರಿತ ಜೀವನಕ್ಕೆ ಪ್ರೇರಣೆ ನೀಡುವ ಪ್ರಕ್ರಿಯೆಯಾಗಿದೆ.

International Yoga Day on June 21: It is mandatory to follow these guidelines while doing `Yoga' | International Yoga Day
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ರೌಡಿಸಂ ಮಟ್ಟಹಾಕಲು ಸರ್ಕಾರ ಬಿಗ್ ಆ್ಯಕ್ಷನ್: ಪ್ರತಿ ಠಾಣಾ ಮಟ್ಟದಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಆದೇಶ

2 Mins Read

ಮಂಡ್ಯದ ಮದ್ದೂರಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ವಿಶ್ವ ಪರಿಸರ ದಿನ

2 Mins Read

ರಾಜ್ಯದಲ್ಲಿ ಮುಂದಿನ 8 ದಿನಗಳ ಕಾಲ ಭಾರೀ ಮಳೆ, ಗುಡುಗು ಸಹಿತ ಬಿರುಗಾಳಿಯ ಆರ್ಭಟ!

1 Min Read
Recent News

​ಎಲ್‌ಪಿಜಿ ದರ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ

​ದುಃಖದಲ್ಲಿರುವಾಗ ಕಣ್ಣೀರು ಹಾಕಿಸುವ ಹಾಡುಗಳು ಏಕೆ ಹೆಚ್ಚು ಆಪ್ತವಾಗುತ್ತವೆ? ವಿಜ್ಞಾನ ಹೇಳುವುದೇನು?

ರಾಜ್ಯದಲ್ಲಿ ರೌಡಿಸಂ ಮಟ್ಟಹಾಕಲು ಸರ್ಕಾರ ಬಿಗ್ ಆ್ಯಕ್ಷನ್: ಪ್ರತಿ ಠಾಣಾ ಮಟ್ಟದಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಆದೇಶ

ಕಾಲಿನಲ್ಲಿ ಕಂಡುಬರುವ ಈ 4 ಲಕ್ಷಣಗಳು ಮಾರಣಾಂತಿಕ ಕ್ಯಾನ್ಸರ್‌ನ ಮೊದಲ ಮುನ್ಸೂಚನೆ ಇರಬಹುದು!

State News
KARNATAKA

ರಾಜ್ಯದಲ್ಲಿ ರೌಡಿಸಂ ಮಟ್ಟಹಾಕಲು ಸರ್ಕಾರ ಬಿಗ್ ಆ್ಯಕ್ಷನ್: ಪ್ರತಿ ಠಾಣಾ ಮಟ್ಟದಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ರೌಡಿಸಂ ಮತ್ತು ಅಸಾಮಾಜಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಭಾರಿ ಸಿದ್ಧತೆ ನಡೆಸಿದೆ.…

ಮಂಡ್ಯದ ಮದ್ದೂರಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ವಿಶ್ವ ಪರಿಸರ ದಿನ

ರಾಜ್ಯದಲ್ಲಿ ಮುಂದಿನ 8 ದಿನಗಳ ಕಾಲ ಭಾರೀ ಮಳೆ, ಗುಡುಗು ಸಹಿತ ಬಿರುಗಾಳಿಯ ಆರ್ಭಟ!

vidhana soudha

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 6 IAS, ಇಬ್ಬರು IPS ಅಧಿಕಾರಿಗಳನ್ನು ವರ್ಗಾವಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.