ಮೈಸೂರು: ನಗರದಲ್ಲಿನ ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ತಾರಕಕ್ಕೇರಿದೆ. ಸಂಸದ ಪ್ರತಾಪ್ ಸಿಂಹ ( MP Prathap Simha ) ವರ್ಸಸ್ ಶಾಸಕ ರಾಮದಾಸ್ ( MLA Ramadas ) ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಈ ನಡುವೆ ಗುಂಬಜ್ ಬಸ್ ನಿಲ್ದಾಣ ವಿವಾದಕ್ಕೆ ( Gumbaz Bus Stop Controversy ) ರೋಚಕ ತಿರುವು ಪಡೆದುಕೊಂಡಿದೆ. ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಇಲಾಖೆಗೆ ಸಲ್ಲಿಸಿರುವಂತ ಮೂಲ ನಕ್ಷೆಯೇ ಬೇರೆಯಾಗಿದ್ದರೇ, ನಿರ್ಮಿಸಿರೋದು ಗುಂಬಜ್ ಮಾದರಿಯಾಗಿರೋದಾಗಿ ತಿಳಿದು ಬಂದಿದೆ.
ಮೈಸೂರಿನ ಜೆ ಎಸ್ ಎಸ್ ಕಾಲೇಜು ಮುಂಭಾಗದಲ್ಲಿ ಮೈಸೂರು-ಊಟಿ ರಸ್ತೆಯಲ್ಲಿ ನಿರ್ಮಿಸಿರುವಂತ ಬಸ್ ನಿಲ್ದಾಣ, ಈಗ ವಿವಾದಕ್ಕೆ ಕಾರಣವಾಗಿದೆ. ಬಸ್ ತಂಗುದಾಣ ( Bus Stop ) ನಿರ್ಮಾಣವನ್ನು ಅನುಮತಿ ಪಡೆಯದೇ ನಿರ್ಮಿಸಲಾಗಿದೆ ಎಂಬುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಬಂಧಪಟ್ಟಂತ ಇಲಾಖೆಗೆ ನೋಟೀಸ್ ಜಾರಿಗೊಳಿಸಿದೆ.
BREAKING NEWS : ಎಎಪಿ ನಾಯಕ ‘ಸತ್ಯೇಂದ್ರ ಜೈನ್’ಗೆ ಬಿಗ್ ಶಾಕ್ ; ಜಾಮೀನು ಅರ್ಜಿ ಮತ್ತೆ ತಿರಸ್ಕೃತ
ಈ ನಡುವೆ ಶೆಲ್ಟರ್ ಮೇಲಿನ ಗುಂಬಜ್ ಮಾದರಿಯು ಈಗ ವಿವಾದಕ್ಕೆ ಕಾರಣವಾಗಿದೆ. ಇದಲ್ಲದೇ ನಿನ್ನೆ ಹೊನ್ನಿನ ಬಣ್ಣ ಹೊಂದಿದ್ದ ಗುಂಬಜ್ ಮೇಲೆ, ರಾತ್ರೋ ರಾತ್ರಿ ಅರಮನೆಗೆ ಹಚ್ಚಿರುವಂತ ಬಣ್ಣವನ್ನು ಹಚ್ಚಲಾಗಿದೆ.
‘ಮೈಸೂರು ಗುಂಬಜ್’ ಹೇಳಿಕೆ ವಿಚಾರಕ್ಕೆ ನಾನು ಬದ್ದ : ಸಂಸದ ಪ್ರತಾಪ್ ಸಿಂಹ |Prathap Simha
ಮತ್ತೊಂದೆಡೆ ಅಕ್ಟೋಬರ್ 21, 2021ರಲ್ಲಿ ಬಸ್ ನಿಲ್ದಾಣ ಶೆಲ್ಟರ್ ನಿರ್ಮಿಸೋದಕ್ಕೆ ಅನುಮತಿ ನೀಡಲಾಗಿದೆ. 19 ಲಕ್ಷ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕಾಗಿ ಕೆ ಆರ್ ಐ ಡಿಎಲ್ ಗೆ ಆಗ ನಕ್ಷೆಯನ್ನು ಸಲ್ಲಿಸಲಾಗಿದೆ. ಈ ನಕ್ಷೆಯಲ್ಲಿ ಶೆಲ್ಟರ್ ಮೇಲೆ ಯಾವುದೇ ಗುಂಬಜ್ ಮಾದರಿಯದ್ದು ಇಲ್ಲದೇ ಇರುವುದು ತಿಳಿದು ಬಂದಿದೆ. ಹೀಗಾಗಿ ನಕ್ಷೆಯೇ ಬೇರೆ, ಬಸ್ ನಿಲ್ದಾಣ ಶೆಲ್ಟರ್ ನಿರ್ಮಿಸಿದ್ದೇ ಬೇರೆಯ ರೀತಿಯಾಗಿ, ಈಗ ಮತ್ತೊಂದು ಟ್ವಿಸ್ಟ್ ವಿವಾದಕ್ಕೆ ಸಿಕ್ಕಿದೆ.