ಬೆಂಗಳೂರು: ದೇಶದಲ್ಲಿ ನಿರುದ್ಯೋಗ ದರ ಏರುಗತಿಯಲ್ಲೇ ಸಾಗಿದೆ, ಜೊತೆಗೆ ಆರ್ಥಿಕ ಹಿಂಜರಿತ, ಬೆಲೆ ಏರಿಕೆಗಳೂ ಸಹ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದ ಪ್ರಧಾನಿ ಈಗ ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಫೋಟೋಶೂಟ್ನಲ್ಲೇ ಮಗ್ನರಾಗಿದ್ದಾರೆ. ಕೈಗೆ ಉದ್ಯೋಗ ಕೊಡುವ ಬದಲು ಯುವಕರ ಮನಸಿಗೆ ದ್ವೇಷದ ಅಮಲು ತುಂಬಿದರೆ ವೈಫಲ್ಯ ಸರಿಹೋಗದು ಎಂಬುದಾಗಿ ಬಿಜೆಪಿ ( BJP ) ವಿರುದ್ಧ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ.
ದೇಶದಲ್ಲಿ ನಿರುದ್ಯೋಗ ದರ ಏರುಗತಿಯಲ್ಲೇ ಸಾಗಿದೆ, ಜೊತೆಗೆ ಆರ್ಥಿಕ ಹಿಂಜರಿತ, ಬೆಲೆ ಏರಿಕೆಗಳೂ ಸಹ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದ ಪ್ರಧಾನಿ ಈಗ ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಫೋಟೋಶೂಟ್ನಲ್ಲೇ ಮಗ್ನರಾಗಿದ್ದಾರೆ.
ಕೈಗೆ ಉದ್ಯೋಗ ಕೊಡುವ ಬದಲು ಯುವಕರ ಮನಸಿಗೆ ದ್ವೇಷದ ಅಮಲು ತುಂಬಿದರೆ ವೈಫಲ್ಯ ಸರಿಹೋಗದು. pic.twitter.com/g3hejxDBiP
— Karnataka Congress (@INCKarnataka) December 2, 2022
ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳ ಮರಣ ಪ್ರಮಾಣ ಹೆಚ್ಚಿದೆ, ಆದರೆ ಸರ್ಕಾರ ಅಂಗನವಾಡಿಗಳಿಗೆ ಅನುದಾನ ಕೊಡಲಿಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಕೊಡಿಲಿಲ್ಲ. ಬಸವರಾಜ ಬೊಮ್ಮಾಯಿ ಅವರೇ, ಮೈಕ್ ಮುಂದೆ ನಿಂತು ದಮ್ಮು ತಾಕತ್ತು ಎಂದು ಮಾತಾಡಿದಂತಲ್ಲ ಆಡಳಿತ ನಡೆಸುವುದು. ಸಣ್ಣ ಯೋಜನೆಗಳನ್ನೂ ನಿರ್ವಹಿಸಲಾಗದ ತಮ್ಮದು ಯಾವ ಸೀಮೆಯ ತಾಕತ್ತು? ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳ ಮರಣ ಪ್ರಮಾಣ ಹೆಚ್ಚಿದೆ, ಆದರೆ ಸರ್ಕಾರ ಅಂಗನವಾಡಿಗಳಿಗೆ ಅನುದಾನ ಕೊಡಲಿಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಕೊಡಿಲಿಲ್ಲ.@BSBommai ಅವರೇ,
ಮೈಕ್ ಮುಂದೆ ನಿಂತು ದಮ್ಮು ತಾಕತ್ತು ಎಂದು ಮಾತಾಡಿದಂತಲ್ಲ ಆಡಳಿತ ನಡೆಸುವುದು.ಸಣ್ಣ ಯೋಜನೆಗಳನ್ನೂ ನಿರ್ವಹಿಸಲಾಗದ ತಮ್ಮದು ಯಾವ ಸೀಮೆಯ ತಾಕತ್ತು? pic.twitter.com/oXmlocTiVO
— Karnataka Congress (@INCKarnataka) December 2, 2022
ಬಿಜೆಪಿ ಆಡಳಿತದಲ್ಲಿ ದಲಿತರು ಬೈಕನ್ನೂ ಓಡಿಸದಿರುವ ಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಗೆ ಸಾಕ್ಷಿ. ಬಿಜೆಪಿಯ ಯಾವೊಬ್ಬ ನಾಯಕನೂ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚದಿರುವುದೇಕೆ? ಎಂದು ಕೇಳಿದೆ.
ಬಿಜೆಪಿ ಆಡಳಿತದಲ್ಲಿ ದಲಿತರು ಬೈಕನ್ನೂ ಓಡಿಸದಿರುವ ಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ.
ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಗೆ ಸಾಕ್ಷಿ.
ಬಿಜೆಪಿಯ ಯಾವೊಬ್ಬ ನಾಯಕನೂ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚದಿರುವುದೇಕೆ? pic.twitter.com/0rsDsWhDoc
— Karnataka Congress (@INCKarnataka) December 2, 2022