ಬೆಂಗಳೂರು: ಅಂಧರ ಅನುಕೂಲಕ್ಕಾಗಿ ಬಿಎಂಟಿಸಿಯ 125 ಬಸ್‌ಗಳಲ್ಲಿ ಆನ್‌ಬೋರ್ಡ್ ತಂತ್ರಜ್ಞಾನ ಪರಿಚಯಿಸಲಾಗಿದ್ದು, ಆಗಸ್ಟ್ ಅಂತ್ಯದ ಒಳಗೆ 500 ಬಸ್‌ಗಳಲ್ಲಿ, ಅನಂತರ ಎಲ್ಲ ಬಸ್‌ಗಳಲ್ಲಿ ಅಳವಡಿಸಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಅಂಧರ ಅನುಕೂಲಕ್ಕಾಗಿ ಬಿಎಂಟಿಸಿಯ 125 ಬಸ್‌ಗಳಲ್ಲಿ ಆನ್‌ಬೋರ್ಡ್ ತಂತ್ರಜ್ಞಾನ ಪರಿಚಯಿಸಲಾಗಿದ್ದು, ಆಗಸ್ಟ್ ಅಂತ್ಯದ ಒಳಗೆ 500 ಬಸ್‌ಗಳಲ್ಲಿ, ಅನಂತರ ಎಲ್ಲ ಬಸ್‌ಗಳಲ್ಲಿ ಅಳವಡಿಸಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.@CMofKarnataka @siddaramaiah @DKShivakumar @RLR_BTM pic.twitter.com/eZz3ycgAHJ
— DIPR Karnataka (@KarnatakaVarthe) July 14, 2025
ರೇಸ್ಡ್ ಲೈನ್ಸ್ ಫೌಂಡೇಶನ್ ಮತ್ತು ಐಐಟಿ ದೆಹಲಿ ಅಭಿವೃದ್ಧಿಪಡಿಸಿರುವ ಈ ಉಪಕರಣವು ದೃಷ್ಟಿ ವಿಶೇಷ ಚೇತನ ವ್ಯಕ್ತಿಗಳು ಸಾರ್ವಜನಿಕ ಬಸ್ಸುಗಳನ್ನು ಹತ್ತಲು ಸಹಾಯ ಮಾಡುವ ಸಾಧನವಾಗಿರುತ್ತದೆ. ಇದು ದೃಷ್ಟಿ ವಿಶೇಷಚೇತನರು ಎದುರಿಸುವ ಸವಾಲುಗಳನ್ನು ಪರಿಹರಿಸುವ ಮೂಲಕ ಸಾರ್ವಜನಿಕ ಬಸ್ಸುಗಳಲ್ಲಿ ಸ್ವತಂತ್ರವಾಗಿ ಪ್ರಯಾಣ ಮಾಡಲು ಸಹಾಯ ಮಾಡುತ್ತದೆ.
ಈ ಸಾಧನವು ಬಸ್ ನಲ್ಲಿ ಅಳವಡಿಸಿರುವ ಸ್ಪೀಕರ್ ಮತ್ತು ರಿಮೋಟ್ ಹೊಂದಿರುತ್ತದೆ. ಬಸ್ ನಿಲ್ದಾಣದ ಹತ್ತಿರ ಬಸ್ಸು ಬಂದಾಗ, ದೃಷ್ಟಿ ವಿಶೇಷ ಚೇತನ ಪ್ರಯಾಣಿಕರು, Find ಬಟನ್ ಒತ್ತಿದರೆ, ಬಸ್ಸಿನಲ್ಲಿ ಅಳವಡಿಸಿರುವ ಸ್ಪೀಕರ್ ನಿಂದ ಬಸ್ ಮಾರ್ಗ ಸಂಖ್ಯೆ ಘೋಷಣೆ ಯಾಗುತ್ತದೆ, ಆಗ ಅವರು ಬಸ್ಸನ್ನು ಹತ್ತುತ್ತಾರೆ. ಮತ್ತು ಚಾಲಕ ಮತ್ತು ನಿರ್ವಾಹಕರಿಗೆ ದೃಷ್ಟಿ ವಿಶೇಷ ಚೇತನ ಪ್ರಯಾಣಿಕರು ಬಸ್ಸಿಗೆ ಹತ್ತಲು ಬರುತ್ತಿರುವ ಮಾಹಿತಿಯು ದೊರೆಯುತ್ತದೆ. ಆ ವೇಳೆ ಬಸ್ಸನ್ನು ಹೆಚ್ಚಿನ ಕಾಲ ನಿಲ್ಲಿಸುತ್ತಾರೆ.