ಬೆಂಗಳೂರು: ನಾನು ಎಲ್ಲಿಯೂ ಪೋಸ್ಟಿಂಗ್ ಗಾಗಿ ಸರ್ಕಾರಕ್ಕೆ ಹಣ ಕೊಡಬೇಕು ಅಂತ ಹೇಳಿಲ್ಲ. ಯಾರೋ ಬಳಿಯಲ್ಲಿ ಅವರು 70 ಲಕ್ಷ ಹಣ ಕೊಟ್ಟಿರೋ ಬಗ್ಗೆ ಹೇಳಿಕೊಂಡಿರೋದನ್ನು ನಾನು ಅದನ್ನು ಹೇಳಿದ್ದೇನೆ. ಅದರ ಹೊರತಾಗಿ ಬೇರೆನೂ ಇಲ್ಲ. ನಾನೇ ಮಾತನಾಡಿದ್ದೇನೆ ಎನ್ನುವ ಹಾಗೆ ಬಿಂಬಿಸಲಾಗುತ್ತಿದೆ ಎಂಬುದಾಗಿ ಪೌರಾಡಳಿತ ಸಚಿವ ಎಂ.ಟಿ ಬಿ ನಾಗರಾಜ್ ( Minister MTB Nagaraj ) ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಇನ್ಸ್ ಪೆಕ್ಟರ್ ನಂದೀಶ್ ( Inspector Nandeesh Death ) ಅವರನ್ನು ನೋಡಿಯೇ ಇಲ್ಲ. ಅವರು ನಮ್ಮ ಸಮುದಾಯದವರೇ ಆದರೂ ಭೇಟಿಯನ್ನು ಮಾಡಿಲ್ಲ. ನಂದೀಶ್ ಗೆ ಹಾರ್ಟ್ ಅಟ್ಯಾಕ್ ಆದ ವಿಚಾರ ಗೊತ್ತಾಗಿ, ಅಲ್ಲಿಗೆ ಹೋಗಿದ್ದೆ. ಆಗ 70 ಲಕ್ಷ ಖರ್ಚು ಮಾಡಿ ಕೊಂಡಿರೋ ವಿಷಯವನ್ನು ಅವರು ಹೇಳಿಕೊಂಡಿದ್ದರ ಬಗ್ಗೆ ಕೇಳಿದೆ. ಅದನ್ನೇ 70-80 ಲಕ್ಷ ಕೊಟ್ಟು ಇಲ್ಲಿ ಏನು ಬಾಯಿ ಬಡಿದುಕೊಳ್ಳಲು ಬಂದಿದಾನಪ್ಪ ಅಂತ ಹೇಳಿದ್ದೆ. ಆ ಬಗ್ಗೆ ಯಾರಿಗೆ ಅವರು ಅಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನು ಸತ್ತೋಗಿರೋರನ್ನೇ ಕೇಳಬೇದು ಎಂದು ಹೇಳಿದರು.
ನಾನು ಯಾವುದೇ ರಾಜೀನಾಮೆ ಕೊಡುವ ಕೆಲಸವನ್ನು ಮಾಡಿಲ್ಲ. ಸರ್ಕಾರಕ್ಕೆ ಹಣ ಕೊಟ್ಟಿದ್ದಾರೆ ಎನ್ನುವ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ದಾಖಲೆ ಕೊಡಲಿ. ಒಬ್ಬ ಇನ್ಸ್ ಪೆಕ್ಟರ್ 70 ರಿಂದ 80 ಲಕ್ಷ ಕೊಟ್ಟು ಕೆಲಸ ಮಾಡೋದಕ್ಕೆ ಆಗುತ್ತಾ? ನಮ್ಮ ಸರ್ಕಾರ ಹಣ ಪಡೆದು ಯಾವುದೇ ಪೋಸ್ಟಿಂಗ್ ಕೊಟ್ಟಿಲ್ಲ, ಯಾರೂ ಹಣ ಪೋಸ್ಟಿಂಗ್ ಗಾಗಿ ಕೊಡಬೇಕಾಗಿಲ್ಲ ಎಂದರು.