ಮಂಡ್ಯ: ಜಿಲ್ಲೆಯಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಮುಂದಾಗದ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡೋದಕ್ಕೆ ಪ್ರೋತ್ಸಾಹಿಸೋದಕ್ಕೆ ಸರ್ಕಾರದ ಮುಂದೆ ಈ ಬೇಡಿಕೆಯನ್ನು ಇರಿಸಿ, ಬಿಜೆಪಿ, ರೈತ ಸಂಘಟನೆಗಳು ವಿನೂತನ ಪ್ರತಿಭಟನೆಯನ್ನು ಮಾಡಿದರು. ಅಲ್ಲದೇ ಡಿಸಿ ಮೂಲಕ ತಮ್ಮ ಬೇಡಿಕೆ ಈಡೇರಿಕೆಗಾಗಿ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.
ಮಂಡ್ಯ ಬಿಜೆಪಿಯಿಂದ ವಿನೂತನ ಹೋರಾಟವನ್ನು ನಡೆಸಲಾಯಿತು. ಅವಿವಾಹಿತ ರೈತ ಯುವಕರ ಪರ ಮಂಡ್ಯ ಬಿಜೆಪಿ ಟೀಂ ನಿಂತಿತು. ಮಂಡ್ಯ ಡಿಸಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರಿಂದ ವಿಭಿನ್ನ ಪ್ರತಿಭಟನೆ ನಡೆಸಲಾಯಿತು.
ಹೆಣ್ಣು ಸಿಗದ ಯುವಕರಿಂದ ಮಠಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವ್ಯಂಗ್ಯ ಮಾಡಿತು. ರೈತ ಮಕ್ಕಳ ಪರ ಬಿಜೆಪಿಯಿಂದ ರಾಜ್ಯ ಸರ್ಕಾರಕ್ಕೆ ವಿಶೇಷ ಮನವಿ ಮಾಡಲಾಯಿತು.
ಕೈಯಲ್ಲಿ ತಾಂಬೂಲ ಹಿಡಿದು, ವಧುವಿನಂತೆ ಬಟ್ಟೆ ತೊಟ್ಟು, ಹಣೆಗೆ ಬಾಸಿಂಗ ಕಟ್ಟಿ ಡಿಸಿ ಕಚೇರಿಗೆ ಬಂದು ಅಣಕು ಪ್ರದರ್ಶನ ನೀಡಲಾಯಿತು. ಮಂಡ್ಯದ ಡಿಸಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರ ವಿಭಿನ್ನ ಪ್ರತಿಭಟನೆಗೆ ಸಾಕ್ಷಿಯಾಯಿತು. ಆ ವೀಡಿಯೋ ಈ ಕೆಳಗಿದೆ ನೋಡಿ…
ಯುವ ರೈತರನ್ನ ಮದುವೆಯಾಗುವ ಯುವತಿಯರಿಗೆ 5 ಲಕ್ಷ ಪ್ರೋತ್ಸಾಹ ಧನಕ್ಕೆ ಆಗ್ರಹಿಸಿದರು. ಬಿಜೆಪಿ ಮುಖಂಡ ಸಿ.ಟಿ. ಮಂಜುನಾಥ್ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತ ಪಡಿಸಲಾಯಿತು.
ರೈತರ ಮಕ್ಕಳಿಗೆ ಹೆಣ್ಣು ಸಿಗದೆ ಕಂಗಲಾಗಿದ್ದಾರೆ. ಮಠ ಕಟ್ಟಿಸಿಕೊಡಿ ಎಂದು ಮನವಿ ಕೂಡ ಮಾಡಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟಾಗೆ ರೈತರ ಮಕ್ಕಳ ಮದುವೆಯಾಗುವ ಯುವತಿಯರಿಗೆ 5 ಲಕ್ಷ ಪ್ರೋತ್ಸಾಹ ಹಣ ಕೊಡಬೇಕು. ಶಾದಿ ಭಾಗ್ಯದ ರೀತಿ ರೈತನ ಮಕ್ಕಳ ಜೀವನಕ್ಕೆ ಆಸರೆಯಾಗುವಂತೆ ಆಗ್ರಹಿಸಿದರು.
ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಯಿತು. ಬಿಜೆಪಿ ಮುಖಂಡರಾದ ಹೊಸಹಳ್ಳಿ ಶಿವು, ಶಿವಲಿಂಗಯ್ಯ, ನಂದೀಶ್ ಸೇರಿ ಹಲವರು ಭಾಗಿಯಾಗಿದ್ದರು.
ವರದಿ; ಗಿರೀಶ್ ರಾಜ್, ಮಂಡ್ಯ
BREAKING: 2027ರ ಜನಗಣತಿಗಾಗಿ ರೂ.11,718 ಕೋಟಿ ಬಜೆಟ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಆರೋಗ್ಯ ಸಂಜೀವಿನಿ ಯೋಜನೆ’ಗೆ ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ.!








