ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಶಾಲೆ ಮತ್ತು ಕಾಲೇಜಿನಲ್ಲಿ ನಿಮ್ಮ ಶರ್ಟ್ ಜೇಬುಗಳಿಗೆ ಫೌಂಟೇನ್ ಅಥವಾ ಬಾಲ್ ಪಾಯಿಂಟ್ ಪೆನ್ ಇಂಕ್’ನಿಂದ ಕಲೆಯಾಗಿದ್ದು ನೆನಪಿದೆಯೇ? ಹೌದು, ನೀವು ಆ ಹಳೆಯ ನೆನಪುಗಳನ್ನ ಮತ್ತೆ ಅನುಭವಿಸಬಹುದು. ಆದ್ರೆ, ನಿಮ್ಮಲ್ಲಿ 72,000 ಇದ್ದರೆ ಮಾತ್ರ.
ಹೌದು, ನೀವು ಸರಿಯಾಗಿ ಓದಿದ್ದೀರಿ. ಮಾಸ್ಚಿನೊ ಕೌಚರ್ ಪುರುಷರ ತಿಳಿ ನೀಲಿ ಬಣ್ಣದ ಶರ್ಟ್ ಹೊರ ತಂದಿದ್ದು, ಶರ್ಟ್ ಪಾಕೆಟ್’ನ ಕೆಳಗೆ ಇಂಕ್ ಸೋರಿಕೆಯಾದಂತಿದೆ. ಸಧ್ಯ ಈ ವೈರಲ್ ಚಿತ್ರಗಳು ನೆಟ್ಟಿಗರನ್ನ ರಂಜಿಸಿವೆ. ಇದನ್ನು ಸೈಟ್’ನಲ್ಲಿ 72 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಶಾಯಿ ಸೋರಿದ ಶರ್ಟ್ ಫ್ಯಾಶನ್ ಆಗಬಹುದು ಎಂದು ಯಾರು ಊಹಿಸಿರಬಹುದು.? ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಫೋಟೋ ಆನ್‌ಲೈನ್’ನಲ್ಲಿ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಅಸಂಬದ್ಧತೆಯಲ್ಲಿ ಹೈ ಫ್ಯಾಷನ್ ಬಗ್ಗೆ ಚರ್ಚೆಯನ್ನ ಪ್ರಾರಂಭಿಸಿದೆ.
72 ಸಾವಿರ ರೂಪಾಯಿ ಬೆಲೆಯ ಮಷಿನೆನ್ ಶರ್ಟ್ ನೋಡಿ.!
We used to make 'Pocha' of these shirts 😭😭 pic.twitter.com/pfnZYnEBQO
— Nikita (@Nikkiiee_d) September 17, 2025
BREAKING : ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಫೈನಲ್’ಗೆ ‘ನೀರಜ್’ ಲಗ್ಗೆ, ಪಾಕ್’ನ ‘ಅರ್ಷದ್ ನದೀಮ್’ ಔಟ್
ಶಿವಮೊಗ್ಗ: ನಮ್ಮ ಸರ್ಕಾರ ರೈತರ ಪರ ಒಲವು ಇರುವಂತದ್ದು- ಶಾಸಕ ಗೋಪಾಲಕೃಷ್ಣ ಬೇಳೂರು
BREAKING : ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್’ನಿಂದ ‘ನೀರಜ್ ಚೋಪ್ರಾ’, ‘ಅರ್ಷದ್ ನದೀಮ್’ ಔಟ್