ತುಮಕೂರು: ಕುಡಿದ ಮತ್ತಿನಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕ ಮನಸೋ ಇಚ್ಚೆ ದಾಳಿ ಮಾಡಿರುವ ಘಟನೆ ತುಮಕೂರು ತಾಲೂಕಿನ ಮಲ್ಲಸಂದ್ರದ ವಿಶ್ವಭಾರತಿ ವಸತಿ ಶಾಲೆಯಲ್ಲಿ ನಡೆದಿದೆ.
BIG BREAKING NEWS: ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನ
ಆರೋಪಿಯನ್ನು ಶಾಲೆಯ ಕಾರ್ಯದರ್ಶಿ ಎನ್ ಮೂರ್ತಿಯ ಮಗ ಮತ್ತು ನಿರ್ದೇಶಕ ಭರತ್ ಎಂದು ಗುರುತಿಸಲಾಗಿದ್ದು, ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಬೆಲ್ಟ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ನಾಲ್ಕು ದಿನಗಳು ಕಳೆದರೂ ಈ ವಿಚಾರವನ್ನು ಶಾಲಾ ಆಡಳಿತ ಮಂಡಳಿ ಮುಚ್ಚಿಟ್ಟು. ಆದರೆ ನಂತರ ಪೋಷಕರು ವಿಚಾರ ತಿಳಿದು ಮಕ್ಕಳನ್ನು ಭೇಟಿ ಮಾಡಿದ್ದಾರೆ.
BIG BREAKING NEWS: ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನ
ಕುಡಿತ ಮತ್ತಿನಲ್ಲಿ ಬಂದ ಭರತ್ ಮಕ್ಕಳು ಬೇಗ ಮಲಗಿದ್ದಾರೆಂದು ಮಕ್ಕಳ ತೊಡೆ ಮತ್ತು ಮರ್ಮಾಂಗಗಳ ಮೇಲೆ ಕಾರಣವಿಲ್ಲದೇ ಹಲ್ಲೆ ನಡೆಸಿದ್ದಾನೆ. ರಾತ್ರಿ ಹತ್ತುಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಕ್ಕಳು ದಮ್ಮಯ ಅಂದರೂ, ಕಾಲಿಗೆ ಬಿದ್ದರೂ ಬಿಟ್ಟಿಲ್ಲ. ಎಣ್ಣೆ ನಶೆ ಕಡಿಮೆಯಾಗುವವರೆಗೂ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಒಂದು ಮಗುವಿನ ಕೈ ಮುರಿದು ಹೋಗುವಂತೆ ಥಳಿಸಿದ್ದಾನೆ.