ನವದೆಹಲಿ: ಐಟಿ ದೈತ್ಯ ಇನ್ಫೋಸಿಸ್ ತನ್ನ ಅಧ್ಯಕ್ಷ ರವಿ ಕುಮಾರ್ ಎಸ್ ಅವರು ಕಂಪನಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ರಾಜೀನಾಮೆಯು ಅಕ್ಟೋಬರ್ 11, 2022 ರಿಂದ ಜಾರಿಗೆ ಬರುತ್ತದೆ, ಮತ್ತು ಇನ್ಫೋಸಿಸ್ ಅವರು ರಾಜೀನಾಮೆ ನೀಡಲು ಯಾವುದೇ ಕಾರಣವನ್ನು ಹೇಳಿಕೆಯಲ್ಲಿ ತಿಳಿಸಿಲ್ಲ ಎನ್ನಲಾಗಿದೆ.
“ರವಿ ಕುಮಾರ್ ಎಸ್ ಅವರು ಕಂಪನಿಗೆ ನೀಡಿದ ಕೊಡುಗೆಗಳಿಗಾಗಿ ನಿರ್ದೇಶಕರ ಮಂಡಳಿಯು ಅವರ ಸೇವೆಗಳ ಬಗ್ಗೆ ಆಳವಾದ ಮೆಚ್ಚುಗೆಯನ್ನು ದಾಖಲಿಸಿದೆ” ಎಂದು ಇನ್ಫೋಸಿಸ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ. ಅಮೆರಿಕದ ನ್ಯೂಯಾರ್ಕ್ನಲ್ಲಿ ನೆಲೆಸಿರುವ ಕುಮಾರ್ ಸುಮಾರು 20 ವರ್ಷಗಳಿಂದ ಇನ್ಫೋಸಿಸ್ನಲ್ಲಿ ಕೆಲಸ ಮಾಡಿದ್ದಾ