ಜಕಾರ್ತ(ಇಂಡೋನೇಷ್ಯಾ): ಇಂಡೋನೇಷ್ಯಾದಲ್ಲಿ ಮೊದಲ ʻಮಂಕಿಪಾಕ್ಸ್(Monkeypox)ʼ ಪ್ರಕರಣ ಪತ್ತೆಯಾಗಿದೆ. ವಿದೇಶ ಪ್ರವಾಸದಿಂದ ಹಿಂದಿರುಗಿದ 27 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳು ಕಂಡುಬಂದಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಇಂಡೋನೇಷಿಯಾದ ಆರೋಗ್ಯ ಸಚಿವಾಲಯದ ವಕ್ತಾರ ಮೊಹಮ್ಮದ್ ಸೈಹ್ರಿಲ್ ಅವರು ರೋಗಿಗೆ ʻವಿದೇಶ ಪ್ರವಾಸದಿಂದ ಹಿಂದಿರುಗಿದ 27 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಇದನ್ನರಿತ ವ್ಯಕ್ತಿ ತಾನೇ ಸ್ವತಃ ಮಂಕಿಪಾಕ್ಸ್ ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಇದೀಗ ಈ ವ್ಯಕ್ತಿ ಈಗ ರಾಜಧಾನಿ ಜಕಾರ್ತಾದಲ್ಲಿ ಪ್ರತ್ಯೇಕವಾಗಿದ್ದಾರೆʼ ಎಂದು ತಿಳಿಸಿದ್ದಾರೆ.
BIGG NEWS: ಉತ್ತರಖಂಡದಲ್ಲಿ ಮೇಘಸ್ಫೋಟ; ಒಡಿಶಾದಲ್ಲಿ 4 ಲಕ್ಷ ಜನರಿಗೆ ಸಂಕಷ್ಟ
BIGG NEWS : ರಾಜ್ಯದಲ್ಲಿ 20 ಕಡೆ ಆಡಳಿತ ಸೌಧ ನಿರ್ಮಾಣ : ಸಚಿವ ಆರ್.ಅಶೋಕ್