ನವದೆಹಲಿ: ಈ ವರ್ಷ ಕೆಲವು ಅಡೆತಡೆಗಳ ಹೊರತಾಗಿಯೂ ಭಾರತೀಯ ಇಂಟರ್ನೆಟ್ ಉದ್ಯಮವು ಬೆಳೆಯುವ ನಿರೀಕ್ಷೆಯಿದೆ ಮತ್ತು 2030 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಮೌಲ್ಯವನ್ನು ತಲುಪಬಹುದು ಎನ್ನಲಾಗಿದೆ. ಅಂದ ಹಾಗೇ 780 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತವು ವಿಶ್ವದ ಎರಡನೇ ಅತಿದೊಡ್ಡ ಇಂಟರ್ನೆಟ್ ಬಳಕೆದಾರರ ದೇಶವಾಗಿದೆ.
ಡಿಜಿಟಲ್ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ, ಭಾರತದ ಇಂಟರ್ನೆಟ್ ಜಿಎಂವಿ (ಮೌಲ್ಯಮಾಪನವಲ್ಲದ) 2030 ರ ವೇಳೆಗೆ ಸುಮಾರು 1 ಟ್ರಿಲಿಯನ್ ಡಾಲರ್ಗೆ ಬೆಳೆಯುತ್ತದೆ ಅಂತ ಹೇಳಲಾಗಿದ್ದು, ಇದು ಸಾರ್ವಜನಿಕ ಮತ್ತು ಖಾಸಗಿ ಮಾರುಕಟ್ಟೆ ಕ್ಯಾಪ್ಗಳಲ್ಲಿ 5 ಟ್ರಿಲಿಯನ್ ಡಾಲರ್ಗೆ ಸಮನಾಗಿರುತ್ತದೆ ಎಂದು ಮಾರುಕಟ್ಟೆ ಗುಪ್ತಚರ ಸಂಸ್ಥೆ ರೆಡ್ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ನ ದತ್ತಾಂಶಗಳು ತಿಳಿಸಿವೆ.
ಒಬ್ಬ ಸರಾಸರಿ ಭಾರತೀಯನು ತನ್ನ ಸ್ಮಾರ್ಟ್ಫೋನ್ನಲ್ಲಿ ದಿನಕ್ಕೆ ಸುಮಾರು 7.3 ಗಂಟೆಗಳನ್ನು ಕಳೆಯುತ್ತಾನೆ, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. “ಆನ್ಲೈನ್ ಮೆಸೇಜಿಂಗ್, ಸೋಷಿಯಲ್ ಮೀಡಿಯಾ, ಯೂಟ್ಯೂಬ್ ಸ್ಟ್ರೀಮಿಂಗ್, ಒಟಿಟಿ ಕಂಟೆಂಟ್ ಮತ್ತು ಶಾರ್ಟ್-ಫಾರ್ಮ್ ವೀಡಿಯೊಗಳಲ್ಲಿ ಕಳೆದ ಸಮಯವು ಆಸಕ್ತಿದಾಯಕವಾಗಿದೆ. ಹೆಚ್ಚಿನ ಆನ್ ಲೈನ್ ಬಳಕೆದಾರರು ಶ್ರೇಣಿ 2 ನಗರಗಳು ಮತ್ತು ದೊಡ್ಡ ನಗರಗಳಿಂದ ಬರುತ್ತಾರೆ ಎನ್ನಲಾಗಿದೆ.