ನವದೆಹಲಿ : ಬಡತನ ಮತ್ತು ಹಸಿವಿನ ವಿರುದ್ಧ ಹೋರಾಡಲು ಭಾರತವು ಒಂದು ಮಿಲಿಯನ್ ಡಾಲರ್ ದೇಣಿಗೆ ನೀಡಿದೆ. ಅಂದ್ಹಾಗೆ, ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ 2004 ರಲ್ಲಿ ಈ ನಿಧಿಯನ್ನ ಸ್ಥಾಪಿಸಿದವು.
IBSA ನಿಧಿಗೆ ದೇಣಿಗೆ ನೀಡಿದ ಭಾರತ.!
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಬಡತನ ಮತ್ತು ಹಸಿವು ನಿರ್ಮೂಲನಾ ನಿಧಿಗೆ (IBSA Fund) 1 ಮಿಲಿಯನ್ ಡಾಲರ್ ಕೊಡುಗೆಯ ಚೆಕ್’ನ್ನ ವಿಶ್ವಸಂಸ್ಥೆಯ ದಕ್ಷಿಣ-ದಕ್ಷಿಣ ಸಹಕಾರ ಕಚೇರಿಯ ನಿರ್ದೇಶಕಿ ದಿಮಾ ಅಲ್-ಖತೀಬ್ ಅವರಿಗೆ ಸೋಮವಾರ ಹಸ್ತಾಂತರಿಸಿದರು.
IBSA ಫಂಡ್ ಎಂದರೇನು.?
ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಈ ಮೂರು ಐಬಿಎಸ್ಎ ದೇಶಗಳು ವಾರ್ಷಿಕವಾಗಿ 1 ಮಿಲಿಯನ್ ಡಾಲರ್ ದೇಣಿಗೆ ನೀಡುತ್ತವೆ. 2004 ರಲ್ಲಿ ಸ್ಥಾಪನೆಯಾದ ನಂತರ, ಈ ನಿಧಿ 2006 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅಂದಿನಿಂದ, ಐಬಿಎಸ್ಎ ನಿಧಿಗೆ ಭಾರತದ ಒಟ್ಟು ಕೊಡುಗೆ 18 ಮಿಲಿಯನ್ ಡಾಲರ್ ದಾಟಿದೆ. UNOSSC ನಿಧಿಯ ವ್ಯವಸ್ಥಾಪಕರಾಗಿ ಮತ್ತು IBSA ನಿಧಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.
BREAKING: ಫೆ.29ರವರೆಗೆ ಕೇಂದ್ರದಿಂದ ‘ಕಲಿಕಾ, ಚಾಲನಾ ಪರವಾನಗಿ, ಕಂಡಕ್ಟರ್ ಲೈಸೆನ್ಸ್’ ಅವಧಿ ವಿಸ್ತರಣೆ
ಗಂಡು ಮಗುವಿನ ತಂದೆಯಾದ ಕ್ರಿಕೆಟಿಗ ‘ಕೊಹ್ಲಿ’, 2ನೇ ಮಗುವಿಗೆ ಜನ್ಮ ನೀಡಿದ ನಟಿ ‘ಅನುಷ್ಕಾ ಶರ್ಮಾ’
ಇಗ್ನೋ ಘಟಿಕೋತ್ಸವ: 3,670 ವಿದ್ಯಾರ್ಥಿಗಳಿಗೆ ಪದವಿ, ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ