ನವದೆಹಲಿ: ಭಾರತದ ವಿದೇಶಾಂಗ ನೀತಿಯು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಮತ್ತು ಅದರ ಮೂಲ ಸ್ತಂಭಗಳು (Key Pillars) ಎಲ್ಲರಿಗೂ ಸುಸ್ಪೃಷ್ಟವಾಗಿ ತಿಳಿದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುತ್ತಿರುವುದನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶ್ಲಾಘಿಸಿದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತದ ವಿದೇಶಾಂಗ ನೀತಿಯು ಸ್ವತಂತ್ರವಾದುದು. ನಮ್ಮ ನೀತಿಯ ಪ್ರಮುಖ ಸ್ತಂಭಗಳು ಎಲ್ಲರಿಗೂ ತಿಳಿದಿವೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ,” ಎಂದು ತಿಳಿಸಿದರು.
ಸುಖೋಯ್-57 (Su-57) ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧವಿಮಾನ ಯೋಜನೆಯಲ್ಲಿ ಭಾರತದೊಂದಿಗೆ ಸಹಕರಿಸಲು ಮತ್ತು ಅದನ್ನು ಸರಬರಾಜು ಮಾಡಲು ರಷ್ಯಾ ಸಿದ್ಧವಾಗಿದೆ ಎಂದು ಪುಟಿನ್ ಹೇಳಿದ್ದರು. ಈ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಸ್ವಾಲ್, “ರಷ್ಯಾ ಮತ್ತು ಭಾರತ ಹಲವು ವರ್ಷಗಳಿಂದ ಬಲವಾದ ರಕ್ಷಣಾ ಸಂಬಂಧವನ್ನು ಹೊಂದಿವೆ. ಈ ನಿರ್ದಿಷ್ಟ ಕಾರ್ಯಕ್ರಮದ ಕುರಿತಾದ ಹೆಚ್ಚಿನ ವಿವರಗಳನ್ನು ರಕ್ಷಣಾ ಸಚಿವಾಲಯದಿಂದ ಪಡೆಯಬಹುದು,” ಎಂದು ಹೇಳಿದರು.
ಸೇಂಟ್ ಪೀಟರ್ಸ್‌ಬರ್ಗ್ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ರಷ್ಯಾದ ಅಧ್ಯಕ್ಷ ಪುಟಿನ್, ಭಾರತದ ವಿದೇಶಾಂಗ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ:








