ನವದೆಹಲಿ: 2018 ರಲ್ಲಿ ಕ್ವೀನ್ಸ್ಲ್ಯಾಂಡ್ನಲ್ಲಿ ಆಸ್ಟ್ರೇಲಿಯಾದ ಮಹಿಳೆಯನ್ನು ಕೊಂದ ಆರೋಪದ ಮೇಲೆ ಭಾರತೀಯ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ಕೊಂದು ಆಸ್ಟ್ರೇಲಿಯಾದಿಂದ ಪರಾರಿಯಾಗಿದ್ದ ರಾಜ್ವಿಂದರ್ ಸಿಂಗ್ ಬಂಧನದ ನಂತರ 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಬಹುಮಾನವನ್ನು ನೀಡುವುದಾಗಿ ಹೇಳಿತ್ತು.
24 ವರ್ಷದ ತೋಯಾ ಕಾರ್ಡಿಂಗ್ಲೆಯನ್ನು ನಾಯಿ ಬೊಗಳಿದ ಕಾರಣ ರಾಜ್ವಿಂದರ್ ಆಕೆ ಕೊಂದಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾನೆ. 38 ವರ್ಷದ ರಾಜ್ವಿಂದರ್ ಸಿಂಗ್ ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ ಕ್ವೀನ್ಸ್ಲ್ಯಾಂಡ್ನ ವಾಂಗೆಟ್ಟಿ ಬೀಚ್ಗೆ ತೆರಳಿದ್ದ ಎನ್ನಲಾಇಗದ್ದು, ತನಿಖೆಯ ಸಮಯದಲ್ಲಿ, ಆತ ತನ್ನೊಂದಿಗೆ ಕೆಲವು ಹಣ್ಣುಗಳು ಮತ್ತು ಅಡುಗೆಮನೆ ಚಾಕುವನ್ನು ತೆಗೆದುಕೊಂಡು ಹೋಗಿದ್ದಾಗಿ ತಿಳಿಸಿದ್ದನಂತೆ.
ಕಾರ್ಡಿಂಗ್ಲಿಯ ನಾಯಿ ರಾಜ್ವಿಂದರ್ ಮೇಲೆ ಬೊಗಳಲು ಪ್ರಾರಂಭಿಸಿದಾಗ, ಇಬ್ಬರೂ ಜಗಳವಾಡಿದ್ದಾರೆ. ಈ ವೇಳೆ ರಾಜ್ವಿಂದರ್ ಕಾರ್ಡಿಂಗ್ಲೆ ಮೇಲೆ ದಾಳಿ ನಡೆಸಿ ಹತ್ಯೆಗೈಯಲು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.