ಟೊರೊಂಟೊ (ಕೆನಡಾ): ಕೆನಡಾದಲ್ಲಿ ಭಗವದ್ಗೀತೆಯ ಹೆಸರಿನ ಉದ್ಯಾನವನದಲ್ಲಿ ಉದ್ಯಾನವನದ ಫಲಕವನ್ನು ಧ್ವಂಸಗೊಳಿಸಿರುವುದನ್ನು ಭಾರತ ಖಂಡಿಸಿದೆ. ಇದನ್ನು “ದ್ವೇಷದ ಅಪರಾಧ” ಎಂದು ಕರೆದಿರುವ ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಈ ವಿಷಯದ ಬಗ್ಗೆ ತನಿಖೆಗೆ ಒತ್ತಾಯಿಸಿದೆ.
ಕೆನಡಾದ ಬ್ರಾಂಪ್ಟನ್ನಲ್ಲಿ ಇತ್ತೀಚೆಗೆ ಅನಾವರಣಗೊಂಡ ಶ್ರೀ ಭಗವದ್ಗೀತಾ ಪಾರ್ಕ್(Bhagvad Gita park) ಚಿಹ್ನೆಯನ್ನು ಶನಿವಾರ ಧ್ವಂಸಗೊಳಿಸಿದ್ದರಿಂದ ಈ ಬೆಳವಣಿಗೆಯಾಗಿದೆ. ಘಟನೆಯನ್ನು ಗಮನಿಸಿ, ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ “ದ್ವೇಷದ ಅಪರಾಧ” ವನ್ನು ಖಂಡಿಸಿದ್ದು, ಕೆನಡಾದ ಅಧಿಕಾರಿಗಳಿಗೆ ಈ ವಿಷಯವನ್ನು ತನಿಖೆ ಮಾಡುವಂತೆ ಮತ್ತು ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವಂತೆ ತಾಕೀತು ಮಾಡಿದೆ.
ಈ ಹಿಂದೆ ಟ್ರಾಯರ್ಸ್ ಪಾರ್ಕ್ ಎಂದು ಕರೆಯಲ್ಪಡುವ ಉದ್ಯಾನವನ್ನು ʻಶ್ರೀ ಭಗವದ್ಗೀತಾ ಪಾರ್ಕ್ʼ ಎಂದು ಮರುನಾಮಕರಣ ಮಾಡಿ ಸೆಪ್ಟೆಂಬರ್ 28 ರಂದು ಅನಾವರಣಗೊಳಿಸಲಾಯಿತು.
ಸುದ್ದಿಯನ್ನು ದೃಢೀಕರಿಸಿದ ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರು ಟ್ವೀಟ್ ಮಾಡಿ, “ಇತ್ತೀಚೆಗೆ ಅನಾವರಣಗೊಂಡ ಶ್ರೀ ಭಗವದ್ಗೀತಾ ಪಾರ್ಕ್ ಚಿಹ್ನೆಯನ್ನು ಧ್ವಂಸಗೊಳಿಸಲಾಗಿದೆ ಎಂದು ನಮಗೆ ತಿಳಿದಿದೆ. ಹೆಚ್ಚಿನ ತನಿಖೆಗಾಗಿ ನಾವು ಇದನ್ನು ಪೀಲ್ ಪ್ರಾದೇಶಿಕ ಪೊಲೀಸರಿಗೆ ನಿಯೋಜಿಸಿದ್ದೇವೆ. ನಮ್ಮ ಉದ್ಯಾನವನ ಇಲಾಖೆಯು ಆದಷ್ಟು ಬೇಗ ಚಿಹ್ನೆಯನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ” ಎಂದಿದ್ದಾರೆ.
BIGG NEWS : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. 5 ರಂದು ರಾಜ್ಯ ‘ಹೆದ್ದಾರಿ ಬಂದ್’ ಗೆ ರೈತ ಸಂಘಟನೆ ಕರೆ
BIGG NEWS : ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿಸುದ್ದಿ : ದಸರಾ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ?