ಬೆಂಗಳೂರು: ಭಾರತೀಯ ವಾಯುಪಡೆಯು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಕುರಿತಾದ ಮಹತ್ವದ ಮಾಹಿತಿಯನ್ನು ಮೊದಲ ಬಾರಿಗೆ ಬಹಿರಂಗಪಡಿಸಿದೆ. ಈ ಐತಿಹಾಸಿಕ ಕಾರ್ಯಾಚರಣೆಯಲ್ಲಿ ಭಾರತವು ಪಾಕಿಸ್ತಾನದ 13 ಯುದ್ಧ ವಿಮಾನಗಳನ್ನು ನಾಶಪಡಿಸಿದ್ದು, ಅವರ 11 ವಾಯುನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ ಎಂದು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎ.ಕೆ. ಭಾರ್ತಿ ಗುರುವಾರ ತಿಳಿಸಿದ್ದಾರೆ.
ನಾಶಗೊಂಡ ವಿಮಾನಗಳಲ್ಲಿ ಕೆಲವು ನೆಲದ ಮೇಲಿದ್ದಾಗಲೇ ಧ್ವಂಸಗೊಂಡಿವೆ. ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಭೂಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಜೀವ್ ಘೋಷಿಸಿದ್ದಾರೆ.
88 ಸೆಕೆಂಡ್‌ನ ದೃಶ್ಯ ಬಿಡುಗಡೆ
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆದ ಈ ಕಾರ್ಯಾಚರಣೆಯ ಒಂದು ವರ್ಷದ ನೆನಪಿಗಾಗಿ, ಪಾಕಿಸ್ತಾನದ ಒಳಗಿನ 9 ಉಗ್ರ ಅಡಗುತಾಣಗಳನ್ನು ಧ್ವಂಸಗೊಳಿಸುವ 88 ಸೆಕೆಂಡುಗಳ ವಿಶೇಷ ವಿಡಿಯೋವನ್ನು ವಾಯುಪಡೆ ಬಿಡುಗಡೆ ಮಾಡಿದೆ.
88 ಗಂಟೆಗಳ ಕಾರ್ಯಾಚರಣೆ: ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಈ ಕಾರ್ಯಾಚರಣೆಯು ಕೇವಲ 88 ಗಂಟೆಗಳ ಕಾಲ ನಡೆದಿತ್ತು. ಶತ್ರು ರಾಷ್ಟ್ರದ ಗಡಿ ದಾಟಿ ಉಗ್ರರ ಶಿಬಿರಗಳ ಮೇಲೆ ನಡೆಸಿದ ಭೀಕರ ದಾಳಿಯ ದೃಶ್ಯಗಳು ಇದರಲ್ಲಿವೆ.
ಪಾಕ್ ವಾದ ತಳ್ಳಿಹಾಕಿದ ಭಾರತ: ಭಾರತದ ವಾಯುನೆಲೆಗಳಿಗೆ ಹಾನಿಯಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರ್ತಿ ಅವರು ತಳ್ಳಿಹಾಕಿದ್ದಾರೆ. ಪಾಕಿಸ್ತಾನ ಉಡಾಯಿಸಿದ ಎಲ್ಲ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಭಾರತ ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Operation Sindoor
Justice served.
Precise in action, eternal in memory—Operation Sindoor continues.
India forgets nothing-India forgives nothing.#operation #Sindoor #operationsindoor #IAF @PMOIndia@rajnathsingh@DefenceMinIndia@SpokespersonMoD@HQ_IDS_India@adgpi… pic.twitter.com/GWvnY9Udjl— Indian Air Force (@IAF_MCC) May 6, 2026








