ದೆಹಲಿ: ಭಾರತ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ(Mohammed Shami)ಗೆ ಕೋವಿಡ್ -19 ಪಾಸಿಟಿವ್ ದೃಢವಾಗಿದ್ದು, ಸೆಪ್ಟೆಂಬರ್ 20 ರಿಂದ ಮೊಹಾಲಿಯಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಬದಲಿಗೆ ವೇಗಿ ಉಮೇಶ್ ಯಾದವ್ ಅವರನ್ನು ಟೀಂಗೆ ಸೇರಿಸಿಕೊಳ್ಳಲಾಗಿದೆ.
ಶಮಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ʻಹೌದು, ಶಮಿ ಅವರಿಗೆ ಕೋವಿಡ್-19 ಪಾಸಿಟಿವ್ ದೃಢವಾಗಿದೆ. ಆದರೆ, ರೋಗಲಕ್ಷಣಗಳು ಸೌಮ್ಯವಾಗಿರುವುದರಿಂದ ಚಿಂತಿಸಬೇಕಾಗಿಲ್ಲ. ಅವರು ಪ್ರತ್ಯೇಕವಾಗಿದ್ದಾರೆ. ಅವರು ಗುಣಮುಖವಾದ ಬಳಿಕ ತಂಡಕ್ಕೆ ಮತ್ತೆ ಸೇರಲು ಸಾಧ್ಯವಾಗುತ್ತದೆ. ಇದು ದುರದೃಷ್ಟಕರ. ಜೀವನ ಇರುವುದೇ ಹೀಗೆʼ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
“ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಸರಣಿಗೆ ಶಮಿ ಸೇರಿಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಆ ಸರಣಿ ಪ್ರಾರಂಭಕ್ಕೆ ಇನ್ನೂ10 ದಿನಗಳಿವೆ. ಅದಕ್ಕೂ ಮುನ್ನ ಶಮಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ʻತಾಜ್ ಮಹಲ್ʼ ಪ್ರೇಮಕಥೆಯಿಂದ ಪ್ರೇರಿತ: ಹಿಂದೂ ಸಂಪ್ರದಾಯದಂತೆ ಆಗ್ರಾದಲ್ಲಿ ಮದುವೆಯಾದ ಮೆಕ್ಸಿಕನ್ ಜೋಡಿ!
BREAKING NEWS : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಮಕ್ಕಳಾಗಿಲ್ಲವೆಂದು ನೋಂದು ದಂಪತಿ ಆತ್ಮಹತ್ಯೆ!