ನವದೆಹಲಿ : 2023-24ರ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಚಾಲ್ತಿ ಖಾತೆ ಕೊರತೆ (CAD) 10.5 ಬಿಲಿಯನ್ ಡಾಲರ್ ಅಥವಾ ಒಟ್ಟು ದೇಶೀಯ ಉತ್ಪನ್ನದ (GDP) 1.2 ಪರ್ಸೆಂಟ್ಗೆ ಇಳಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಿದೆ.
ಇದು ಹಿಂದಿನ ತ್ರೈಮಾಸಿಕದಲ್ಲಿ ಅಂದರೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 11.4 ಬಿಲಿಯನ್ ಡಾಲರ್ ಮತ್ತು ಒಂದು ವರ್ಷದ ಹಿಂದೆ 2022-23ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 16.8 ಬಿಲಿಯನ್ ಡಾಲರ್ ಆಗಿತ್ತು. ನಿವ್ವಳ ಎಫ್ಡಿಐ (ವಿದೇಶಿ ನೇರ ಹೂಡಿಕೆ) ಒಳಹರಿವು 2023ರ ಏಪ್ರಿಲ್-ಡಿಸೆಂಬರ್ನಲ್ಲಿ 8.5 ಬಿಲಿಯನ್ ಡಾಲರ್ ಆಗಿತ್ತು. ಒಂದು ವರ್ಷದ ಹಿಂದೆ 2022-23ರ ಇದೇ ಅವಧಿಯಲ್ಲಿ ಇದು 21.6 ಬಿಲಿಯನ್ ಡಾಲರ್ ಆಗಿತ್ತು.
ಅಲ್ಲದೆ, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವಿದೇಶಿ ವಿನಿಮಯ ಮೀಸಲು (ಪಾವತಿಗಳ ಸಮತೋಲನದ ಆಧಾರದ ಮೇಲೆ) 6 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಇದು 11.1 ಬಿಲಿಯನ್ ಡಾಲರ್ ಹೆಚ್ಚಾಗಿದೆ. 2023-24ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸರಕು ವ್ಯಾಪಾರ ಕೊರತೆ 71.6 ಬಿಲಿಯನ್ ಡಾಲರ್ ಆಗಿದ್ದು, ಇದು 2022-23ರ ಇದೇ ತ್ರೈಮಾಸಿಕದಲ್ಲಿ 71.3 ಬಿಲಿಯನ್ ಡಾಲರ್ಗಿಂತ ಸ್ವಲ್ಪ ಹೆಚ್ಚಾಗಿದೆ.
ಸಾಫ್ಟ್ವೇರ್ ರಫ್ತು, ವ್ಯಾಪಾರ ಮತ್ತು ಪ್ರಯಾಣ ಸೇವೆಗಳ ಹೆಚ್ಚಳದ ಹಿನ್ನೆಲೆಯಲ್ಲಿ ಸೇವಾ ರಫ್ತು ವರ್ಷದಿಂದ ವರ್ಷಕ್ಕೆ ಶೇಕಡಾ 5.2ರಷ್ಟು ಹೆಚ್ಚಾಗಿದೆ. ನಿವ್ವಳ ಸೇವೆಗಳ ಸ್ವೀಕೃತಿಗಳು ಹಿಂದಿನ ತ್ರೈಮಾಸಿಕದಲ್ಲಿ ಮಾತ್ರವಲ್ಲದೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. ಇದು ಚಾಲ್ತಿ ಖಾತೆ ಕೊರತೆಯನ್ನ ಕಡಿಮೆ ಮಾಡಲು ಸಹಾಯ ಮಾಡಿತು.
ಹಣಕಾಸು ಖಾತೆ ಮಟ್ಟದಲ್ಲಿ, ವಿದೇಶಿ ನೇರ ಹೂಡಿಕೆಯಲ್ಲಿ 4.2 ಬಿಲಿಯನ್ ಡಾಲರ್ ನಿವ್ವಳ ಒಳಹರಿವು ಇತ್ತು. ಇದು 2022-23ರ ಮೂರನೇ ತ್ರೈಮಾಸಿಕದಲ್ಲಿ 2 ಬಿಲಿಯನ್ ಡಾಲರ್ ನಿವ್ವಳ ಒಳಹರಿವಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಪರಿಶೀಲನೆಯ ತ್ರೈಮಾಸಿಕದಲ್ಲಿ ವಿದೇಶಿ ಬಂಡವಾಳ ಹೂಡಿಕೆಗಳು 12.0 ಬಿಲಿಯನ್ ಡಾಲರ್ ಆಗಿದ್ದು, ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 4.6 ಬಿಲಿಯನ್ ಡಾಲರ್ ಆಗಿತ್ತು.
ಬೆಂಗಳೂರು : ‘BMTC’ ಬಸ್ ಅಲ್ಲಿ ಮಹಿಳೆಯ ಮೇಲೆ ಹಲ್ಲೆ ಪ್ರಕರಣ : ಪೊಲೀಸರ ವಿಚಾರಣೆ ವೇಳೆ ಕಂಡಕ್ಟರ್ ಹೇಳಿದ್ದೇನು?
BREAKING : ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಹಡಗಿನಲ್ಲಿದ್ದ ಎಲ್ಲ 22 ಸಿಬ್ಬಂದಿ ಭಾರತೀಯರು : ಹಡಗು ಕಂಪನಿ