ದುಬೈ: ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್(Rahul Dravid) ಅವರು ಕೋವಿಡ್ನಿಂದ ಗುಣಮುಖರಾಗಿದ್ದು, ಇಂದು ದುಬೈನಲ್ಲಿ ನಡೆಯುವ ಪಾಕಿಸ್ತಾನದ ವಿರುದ್ಧದ ಬಹುನಿರೀಕ್ಷಿತ ಏಷ್ಯಾ ಕಪ್ ಆರಂಭಿಕ ಪಂದ್ಯಕ್ಕೂ ಮುಂಚಿತವಾಗಿ ಭಾರತ ತಂಡವನ್ನು ಸೇರಿದ್ದಾರೆ.
ಏಷ್ಯಾ ಕಪ್ ಆರಂಭಕ್ಕೂ ಮುನ್ನ ಕೊರೊನಾ ಸೋಂಕಿಗೆ ಒಳಗಾಗಿದ್ದ ರಾಹುಲ್ ದ್ರಾವಿಡ್ ಕ್ವಾರಂಟೈನ್ಗೆ ಒಳಗಾಗಿದ್ದರು. ಹೀಗಾಗಿ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರನ್ನು ಭಾರತದ ಹಂಗಾಮಿ ತರಬೇತುದಾರರನ್ನಾಗಿ ನೇಮಕ ಮಾಡಲಾಗಿತ್ತು. ಲಕ್ಷ್ಮಣ್ ಏಷ್ಯಾ ಕಪ್ಗಾಗಿ ದುಬೈಗೆ ತೆರಳಿ ಅಭ್ಯಾಸದ ವೇಳೆ ತಂಡಕ್ಕೆ ಅಗತ್ಯ ಸಲಹೆ ನೀಡಿದ್ದರು. ಇದೀಗ, ರಾಹುಲ್ ಕೋವಿಡ್ನಿಂದ ಚೇತರಿಸಿಕೊಂಡು ದುಬೈನಲ್ಲಿ ತಂಡವನ್ನು ಸೇರಿದ್ದಾರೆ. ಇನ್ನೂ, ಲಕ್ಷ್ಮಣ್ ವಾಪಸ್ ತವರಿಗೆ ಮರಳುವ ಸಾಧ್ಯತೆ ಇದೆ.
SHOCKING NEWS: ʻಅಗ್ನಿವೀರ್ʼ ಪರೀಕ್ಷೆಯಲ್ಲಿ ಫೇಲ್: ಮನನೊಂದು ಉತ್ತರಾಖಂಡ್ನ ಯುವಕ ಆತ್ಮಹತ್ಯೆಗೆ ಶರಣು
BIGG NEWS : ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಭಾರೀ ಪ್ಲ್ಯಾನ್ : ಗಣೇಶ ಮೂರ್ತಿ ಕೂರಿಸಲು 3 ರೀತಿ ಪ್ರದೇಶಗಳ ಗುರುತು