ಮಂಡ್ಯ : ಮುಂದಿನ ಜನ್ಮದಲ್ಲಿ ಮುಸ್ಲಿಂ ಧರ್ಮದಲ್ಲಿ ಹುಟ್ಟಬೇಕು ಅಂತ ಕಾಂಗ್ರೆಸ್ ಶಾಸಕ ಸಂಗಮೇಶ ಹೇಳಿಕೆ ನೀಡಿದ್ದು, ಇವರ ಹೇಳಿಕೆಗೆ ಮದ್ದೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ ನೀಡಿದ್ದು, ಮುಂದಿನ ಜನ್ಮದಲ್ಲಿ ದನ ತಿನ್ನುವವನಾಗಿಯೇ ಹುಟ್ಟು ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಸುಳ್ಳಿಗೆ ನಾವೇನೂ ಸುಳ್ಳು ಹೇಳೋಕ್ಕಾಗಲ್ಲ. ತಾತ್ಕಾಲಿಕವಾಗಿ ಆರೋಪಿಗಳನ್ನು ರಕ್ಷಣೆ ಮಾಡಬಹುದು. ಮಸೀದಿಯಿಂದ ಕಲ್ಲು ಹೊಡೆಯಲು ಬಿಜೆಪಿ ಹೇಳಿತ್ತಾ? ಯಾವ ಮುಖ ಇಟ್ಟುಕೊಂಡು ಈ ರೀತಿ ಮಾತಾಡುತ್ತಾರೆ? ನಾಚಿಕೆ ಆಗಲ್ವಾ ಇವರಿಗೆ? ಎಂದು ಕಿಡಿ ಕಾರಿದರು.
ಅದರ ಬದಲು ಕ್ಯಾಬಿನೆಟ್ ಪೂರ್ತಿ ಸಂಗಮೇಶ್ ಹೇಳಿದಂತೆ ಮತಾಂತರ ಆಗಿ. ಆಗ ನಾವು ನಿಮ್ಮನ್ನು ನೇರವಾಗಿ ಎದುರಿಸುತ್ತೇವೆ. ಮಸೀದಿ ಹತ್ತಿರ ಬಂದಾಗ ಪೊಲೀಸರು ಮೈಕ್ ಆಫ್ ಮಾಡಿಸಿದ್ದಾರೆ. ಅದೇ ಅಸಹಿಷ್ಣುತೆ. ಹಿಂದೂ ದೇವಾಲಯದ ಬಳಿ ಮಿಲಾದ್ ಮೆರವಣಿಗೆ ಬರಬಾರದು ಎಂದು ಹೇಳಿದರೆ ಮುಸಲ್ಮಾನರು ಎಲ್ಲಿ ಹೋಗುತ್ತಾರೆ?. ಕರೆಂಟ್ ಆಫ್ ಮಾಡಿಸಿ ಕಲ್ಲು ಹೊಡೆಸಲು ಯಾರು ಕಾರಣ? ಇವರ ಈ ರೀತಿಯ ಹೇಳಿಕೆಗಳಿಂದಲೇ ಅವರು ಕೊಬ್ಬಿರುವುದು. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಎಷ್ಟೇ ಬ್ರದರ್ಸ್ ಎಂದರೂ ಅವರ ದೃಷ್ಟಿಯಲ್ಲಿ ಕಾಫಿರರೇ.
ನಿಮ್ಮ ಜೊತೆ ಇರುತ್ತೇವೆ ಎಂಬ ಮಾನಸಿಕತೆ ತೋರಿಸುವುದರಿಂದಲೇ ಅವರಿಗೆ ಧೈರ್ಯ ಆಗುತ್ತದೆ. ತಾಕತ್ ಕಡಿಮೆ ಇದ್ದು ಕಲ್ಲು ಹೊಡೆದಿದ್ದಾರೆ. ಸ್ವಲ್ಪ ತಾಕತ್ ಬಂದರೆ ಜೀವಂತ ಸುಡುತ್ತಾರೆ. ಇಲ್ಲಿ ಟೆಸ್ಟ್ ಡೋಸ್ ಮಾಡಿ ನೋಡಿ ನಂತರ ಬೇರೆ ಕಡೆ ವಿಸ್ತರಣೆ ಮಾಡುತ್ತಾರೆ. ಉಪಮುಖ್ಯಮಂತ್ರಿಗಳೇ ನಿಮ್ಮ ಆಡಳಿತದಲ್ಲಿ ಯಾರು ನೆಮ್ಮದಿಯಾಗಿದ್ದಾರೆ?. ನಾಚಿಕೆಯಾಗಲ್ವಾ ನಿಮಗೆ ಈ ರೀತಿ ಮಾತಾಡಲು. ಇದೇ ಇಸ್ಲಾಂ ಹೆಸರಿನಲ್ಲೇ ನಿಮ್ಮ ಶಾಸಕರ ಮನೆ ಸುಟ್ಟಿದ್ದು. ನಿಮ್ಮ ಓಲೈಕೆ ರಾಜಕೀಯಕ್ಕೆ ಸ್ವಲ್ಪ ಮಿತಿ ಇರಲಿ. ನಿಮ್ಮ ರಾಜಕೀಯಕ್ಕೆ ದೇಶವನ್ನು ಯಾಕೆ ಬಲಿ ತೆಗೆದುಕೊಳ್ಳುತ್ತೀರಿ?.
ಮಿಲಾದ್ ಮೆರವಣಿಗೆ ವೇಳೆ ನಮಗೆ ಅನ್ನಿಸದೇ ಇರುವುದು ಇವರಿಗೆ ಗಣೇಶ ಮೆರವಣಿಗೆ ವೇಳೆ ಯಾಕೆ ಅನ್ನಿಸುತ್ತದೆ? ತಾಲಿಬಾನ್ ಮಾನಸಿಕತೆಯನ್ನು ಕರ್ನಾಟಕದಲ್ಲಿ ಯಾರು ಬೆಳೆಸುತ್ತಿದ್ದಾರೆ ಎಂಬುದು ತನಿಖೆ ಆಗಬೇಕು. ಇದು ಮುಖ್ಯಮಂತ್ರಿಗಳ5 ರಾಷ್ಟ್ರೀಯ ಕರ್ತವ್ಯ, ಸುಳ್ಳು ಹೇಳುವುದಲ್ಲ. ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದ ಮೇಲೆ ಭದ್ರಾವತಿಯಲ್ಲಿ ಕೂಗಿದ್ದು ಏನು ಮಹಾ? ಭದ್ರಾವತಿ ಶಾಸಕ ಅವನು ಮನುಷ್ಯತ್ವ ಇಲ್ಲದವನ ತರಹ ಮಾತಾಡುತ್ತಾನೆ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತಾನಂತೆ. ನಿನ್ನ ಯಾವನಯ್ಯಾ ತಡೆಯುತ್ತಾನೆ. ಈ ಜನ್ಮದಲ್ಲೇ ಹೋಗು ಎಂದು ವಾಗ್ದಾಳಿ ನಡೆಸಿದರು.