ಬೆಳಗಾವಿ : ಬೆಳಗಾವಿ ಗಡಿಯಲ್ಲಿ 400 ಕೋಟಿ ರಾಬರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು 400 ಕೋಟಿ ಪ್ರಕರಣದಲ್ಲಿ ಕಾಂಗ್ರೆಸ್ ಬಿಜೆಪಿ ಅಂತ ಏನಿಲ್ಲ ಎಲ್ಲರೂ ಇರುತ್ತಾರೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು ನಮ್ಮ ಪೊಲೀಸರಿಗೆ ಸಹಕರಿಸುತ್ತಿಲ್ಲ. ಪ್ರಕರಣ ಸಂಬಂಧಪಟ್ಟಂತೆ ಈಗಾಗಲೇ ಪತ್ರ ಬರೆದಿದ್ದಾರೆ. ಯಾರಾದರೂ ದೂರು ನೀಡಿದರೆ ನಮ್ಮವರು ತನಿಖೆ ಮಾಡುತ್ತಾರೆ. ಚೋರ್ಲ ಘಾಟ್ ಪ್ರದೇಶದ ವ್ಯಾಪ್ತಿ ದೊಡ್ಡದಿದೆ. ದರೋಡೆ ನಡೆದ ಸ್ಥಳ ಮಹಾರಾಷ್ಟ್ರ ಗೋವಾ ಅಥವಾ ಕರ್ನಾಟಕಕ್ಕೆ ಸೇರಿದೆಯೋ ಅನ್ನೋ ಬಗ್ಗೆ ಗೊಂದಲವಿದೆ ತನಿಖೆ ಮಾಡುತ್ತಾರೆ ಎಂದರು.
400 ಕೋಟಿ ಹಣ ಕಾಂಗ್ರೆಸ್ಗೆ ಸೇರಿದ್ದು ಎಂಬ ಆರೋಪದ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಇದರಲ್ಲಿ ಕಾಂಗ್ರೆಸ್ ಬಿಜೆಪಿ ಅಂತ ಏನು ಇಲ್ಲ ಎಲ್ಲರೂ ಇರುತ್ತಾರೆ. ದರೋಡೆ ಪ್ರಕರಣದಲ್ಲಿ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ನಮ್ಮ ಪೊಲೀಸರು ಮಹಾರಾಷ್ಟ್ರ ಪೊಲೀಸ್ರಿಗೆ ಸಹಕಾರ ನೀಡಿದ್ದಾರೆ. ಮಹಾರಾಷ್ಟ್ರ ತನಿಖೆಗೆ ನಮ್ಮ ಪೊಲೀಸರು ಸಹಕಾರ ನೀಡುತ್ತಾರೆ ಎಂದು ಸಚಿವತಿ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.








