ಮಂಡ್ಯ : ಶ್ರೀರಂಗಪಟ್ಟಣದಲ್ಲಿ 415ನೇ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಜಂಬೂ ಸವಾರಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಮಂಗಳಾರತಿ ಬಳಿಕ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮರದ ಅಂಬಾರಿಯಲ್ಲಿ ವಿರಾಜಮಾನರಾದ ನಾಡದೇವಿಗೆ ಪುಷ್ಪಾರ್ಚನೆಸಲ್ಲಿಸಲಾಯಿತು.
ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಪುಷ್ಪಾರ್ಚನೆ ಸಲ್ಲಿಸಿದರು. ಪುಷ್ಪಾರ್ಚನೆ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಟಿ.ಎಸ್.ನಾಗಾಭರಣ ಅವರಿಗೆ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್ ಸಾಥ್ ನೀಡಿದರು.
ಕಿರಂಗೂರು ಬನ್ನಿಮಂಟಪದಿಂದ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು. ಮರದ ಅಂಬಾರಿ ಹೊತ್ತ ಮಹೇಂದ್ರ ಆನೆಗೆ ಕಾವೇರಿ, ಲಕ್ಷ್ಮೀ ಆನೆಗಳು ಸಾಥ್ ನೀಡಿದವು. ಕಿರಂಗೂರಿನ ಬನ್ನಿ ಮಂಟಪದಿಂದ ಶ್ರೀ ರಂಗನಾಥಸ್ವಾಮಿ ದೇವಾಲಯವರೆಗೆ ಮೆರವಣಿಗೆ ಸಾಗಲಿದೆ.