ಮೈಸೂರು: ಶುಕ್ರವಾರದಂದು ಮೈಸೂರಿನ ಮಹಾರಾಜ ಕ್ರಿಕೆಟ್ ಮೈದಾನದಲ್ಲಿ ದಸರಾ ಬೇಸ್‌ಬಾಲ್ ಕಪ್ – 2025 ಅನ್ನು ಬೇಸ್ ಬಾಲ್ ಹಾಡುವ ಮೂಲಕ ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಿದರು.
ಈ ಬಳಿಕ ಮಾತನಾಡಿರುವಂತ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಇದೊಂದು ಮೈಸೂರಿನ ಯುವಕರಿಗೆ ಹೊಸ ಪ್ರೇರಣೆ ನೀಡುವಂತ ಕ್ರೀಡಾ ಉತ್ಸವವಾಗಿದೆ ಎಂಬುದಾಗಿ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಮೈಸೂರಿನ ದಸರಾ ಹಬ್ಬವು ಸಂಸ್ಕೃತಿ, ಕಲೆ ಮತ್ತು ಕ್ರೀಡೆಯ ಸಮನ್ವಯವಾಗಿದ್ದು, ಈ ಬಾರಿ ಅದರ ಭಾಗವಾಗಿ ಬೇಸ್‌ಬಾಲ್ ಸ್ಪರ್ಧೆ ಆಯೋಜಿಸಲಾಗಿದೆ. ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಬೇಸ್‌ಬಾಲ್ ನಂತಹ ಕ್ರೀಡೆಗಳ ಮೂಲಕ ಯುವಕರಲ್ಲಿ ಕ್ರೀಡಾಸ್ಪೂರ್ತಿ, ಶಿಸ್ತು ಮತ್ತು ಒಗ್ಗಟ್ಟಿನ ಭಾವನೆ ಬೆಳೆಸುವ ಉದ್ದೇಶ ಇದರ ಹಿಂದಿದೆ.
ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪ್ರೇಮಿಗಳು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಮೈದಾನವನ್ನು ಕಳೆಗಟ್ಟಿದರು. ವಿವಿಧ ಜಿಲ್ಲೆಗಳ ತಂಡಗಳು ಭಾಗವಹಿಸಿರುವ ಈ ಸ್ಪರ್ಧೆಯಲ್ಲಿ ಗೆದ್ದ ತಂಡಕ್ಕೆ ಬಹುಮಾನ ವಿತರಣೆ ನಡೆಯಲಿದೆ.
ರಾಜ್ಯಮಟ್ಟದ ಕ್ಲಬ್ ಬೇಸ್‌ಬಾಲ್ ಚಾಂಪಿಯನ್‌ಶಿಪ್ ಬಗ್ಗೆ ಮತ್ತಷ್ಟು ಮಾಹಿತಿ
ಮೈಸೂರಲ್ಲಿ ಶುಕ್ರವಾರದಿಂದ ಅಕ್ಟೋಬರ್.12, 2025ರವರೆಗೆ ಮೂರು ದಿನಗಳ ಕಾಲ ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಕ್ಲಬ್ ಬೇಸ್‌ಬಾಲ್ ಟೂರ್ನಮೆಂಟ್ ನಡೆಯುತ್ತಿದೆ. ಅ.10ರ ಶುಕ್ರವಾರದಂದು ಮೊದಲನೇ ದಿನ ವಿವಿಧ ತಂಡಗಳು ಭಾಗವಹಿಸಿದ್ದವು. ಮೂರು ದಿನಗಳ ಶಿಬಿರದಲ್ಲಿ ಒಟ್ಟು 17 (Mens and Womens) ತಂಡಗಳು ಭಾಗವಹಿಸಲಿವೆ.
ಮೈಸೂರು ಕ್ರೀಡಾಪಟುಗಳು ಕ್ರೀಡಾಭಿಮಾನಿಗಳು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದಾರೆ.ಮೂರು ದಿನಗಳ ಈ ಸ್ಪರ್ಧೆ ರಾಜ್ಯದ ಯುವ ಕ್ರೀಡಾಪಟುಗಳಿಗೆ ಮಹತ್ವದ ವೇದಿಕೆಯಾಗಿದೆ.
ಈ ರಾಜ್ಯಮಟ್ಟದ ಕ್ಲಬ್ ಬೇಸ್‌ಬಾಲ್ ಚಾಂಪಿಯನ್‌ಶಿಪ್ – ಮೈಸೂರು ಹಾಕ್‌ಸ್ ರವರ ಪ್ರಸ್ತುತಿಯೊಂದಿಗೆ, ಎಂ.ಡಿ.ಬಿ.ಎ (ಮೈಸೂರು ಜಿಲ್ಲಾ ಬೇಸ್‌ಬಾಲ್ ಅಸೋಸಿಯೇಶನ್) ಮತ್ತು ಬಿ.ಎ.ಕೆ (ಬೇಸ್‌ಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕ) ಸಹಯೋಗದಲ್ಲಿ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಸಾ. ರಾ. ಮಹೇಶ್, ಮಾಜಿ ಸಚಿವರು ಮತ್ತು ಮಾಜಿ ಶಾಸಕರು, ಎಂ. ಜೆ. ಸುರೇಶ್ ಗೌಡ, ಸ್ಥಾಪಕರು – ವಿಶ್ವಮಾನವ ಯುವ ವಿದ್ಯಾರ್ಥಿ ವೇದಿಕೆ, ಮೈಸೂರು ವಿಶ್ವವಿದ್ಯಾನಿಲಯ, ಹನುಮಂತೇಶ್, ಅಧ್ಯಕ್ಷರು – ಪುಣ್ಯಕೋಟಿ ಸೇವಾ ಟ್ರಸ್ಟ್, ಶಂಕರ್ ನಾರಾಯಣ, ಮಾಜಿ ದೈಹಿಕ ಶಿಕ್ಷಣ ನಿರ್ದೇಶಕರು (ಎನ್‌ಐಇ), ಕ್ರೀಡಾ ಉತ್ಸಾಹಿಗಳು, ಡಾ. ಶಿವಣ್ಣೇ ಗೌಡ, ವಕೀಲರು ಮತ್ತು ಕಾನೂನು ಸಲಹೆಗಾರರು, ಮಂಜೇ ಗೌಡ, ವಿಧಾನ ಪರಿಷತ್ ಸದಸ್ಯರು (ಎಮ್‌ಎಲ್‌ಸಿ) ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ