ಕೋಲಾರ: ಜಿಲ್ಲೆಯ ನರಸಾಪುರದಲ್ಲಿ ವ್ಯಕ್ತಿಯಬ್ಬ ಆಟೋ ಓಡಿಸಿಕೊಂಡೆ ಈಗಾಗಲೇ ಮೂರು ಹುಡುಗಿಯರನ್ನು ಮದುವೆಯಾಗಿ ಮೋಸ ಮಾಡಿರುವ ಘಟನೆ ನಡೆದಿದೆ. ಇದೀಗ ಅಪ್ರಾಪ್ತಯೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
BIGG NEWS: ನನಗೆ ಸಚಿವ ಸ್ಥಾನ ನೀಡಿಲ್ಲ, ಅಧಿವೇಶನಕ್ಕೆ ಹೋಗಲ್ಲ; ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ
ನರಸಾಪುರ ಗ್ರಾಮದ ಆಟೋ ಚಾಲಕ ಅಲಿಯಾಸ್ ಸಂತೋಷ್ ಎಂಬಾತ ನಿತ್ಯ ಕೂಲಿ ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.
ಸಂತೋಷ್ ನರಸಾಪುರ ಗ್ರಾಮದಲ್ಲೇ ಆಟೋ ಓಡಿಸಿಕೊಂಡಿದ್ದು, ನಿತ್ಯ ಕೂಲಿ ಕೆಲಸದವರನ್ನು ಕೆರೆದುಕೊಂಡು ಹೋಗುತ್ತಿದ್ದ. ಅದರಲ್ಲಿ ಈ ಬಾಲಕಿ ಹಾಗೂ ಆಕೆಯ ಅಜ್ಜಿ ಕೂಡಾ ನಿತ್ಯ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಡಿ. 5ರಂದು ಬಾಲಕಿಯ ಅಜ್ಜಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗಿರಲಿಲ್ಲ. ಈ ವೇಳೆ ಬಾಲಕಿಯನ್ನು ಪುಸಲಾಯಿಸಿರುವ ಸಂತೋಷ್ ಕರೆದುಕೊಂಡು ನಾಪತ್ತೆಯಾಗಿದ್ದಾನೆ.
BIGG NEWS: ನನಗೆ ಸಚಿವ ಸ್ಥಾನ ನೀಡಿಲ್ಲ, ಅಧಿವೇಶನಕ್ಕೆ ಹೋಗಲ್ಲ; ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ
ಕೆಲಸಕ್ಕೆಂದು ಹೋದ 17 ವರ್ಷದ ಬಾಲಕಿ ಮತ್ತೆ ವಾಪಸ್ ಬಂದಿಲ್ಲ, ಎಲ್ಲಿ ಹೋಗಿದ್ದಾಳೆ ಎಂದು ಪರಿಶೀಲನೆ ನಡೆಸಲಾಗಿ, ಬಾಲಕಿಯನ್ನು ಆಟೋ ಡ್ರೈವರ್ ಸಂತೋಷ್ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎನ್ನುವುದು ತಿಳಿದು ಬಂದಿದೆ. ವಿಷಯ ತಿಳಿದ ಕೂಡಲೇ ಬಾಲಕಿಯ ಪೊಷಕರು ವೇಮಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.