ಕಲಬುರಗಿ : ಕಲಬುರ್ಗಿಯಲ್ಲಿ ಖತರ್ನಾಕ್ ಕಳ್ಳನೊಬ್ಬ ತನ್ನ ಗೆಳತಿಯ ಜೊತೆಗೆ ಸಹ ಜೀವನ ನಡೆಸಲು ಕಳ್ಳತನಕ್ಕೆ ಇಳಿದಿದ್ದಾನೆ. ಇದೀಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.ಹೌದು ಗೆಳತಿಯೊಂದಿಗೆ ಸಹ ಜೀವನ (ಲಿವಿಂಗ್ ಟುಗೆದರ್) ನಡೆಸಲು ಮತ್ತು ಆಕೆ ಹಾಗೂ ತನ್ನ ಶೋಕಿ ಆಸೆಗಳನ್ನು ತಿರಿಸಿಕೊಳ್ಳಲು ಕಳ್ಳತನಕ್ಕಿಳಿದ ವ್ಯಕ್ತಿಯನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಸುಲಿಗೆ ಮತ್ತು ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಶೋಕಿ ಈಡೇರಿಸಿಕೊಳ್ಳಲು ಇಂತಹ ಕೃತ್ಯಗಳನ್ನು ಎಸಗುತ್ತಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ. ಅಫಜಲಪುರದ ಕಲ್ಲಪ್ಪ ಅಲಿಯಾಸ ಸಂಜು ಪೂಜಾರಿ (24) ಬಂಧಿತ ಆರೋಪಿ. ಈತ ಯುವತಿಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದ. ಕೂಲಿ ಕೆಲಸ ಮಾಡುತ್ತಿದ್ದು, ಖರ್ಚಿಗೆ ದುಡಿದ ಹಣ ಸಾಕಾಗದೇ ಇದ್ದಾಗ ಪರ್ಸ್ಗಳನ್ನು ಕದಿಯುತ್ತಿದ್ದ. ಮನೆ ಖರ್ಚು, ತನ್ನ ಖರ್ಚು ಹೆಚ್ಚಾದಂತೆ ಮನೆಗಳ ಕಳ್ಳತನ ಮಾಡುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಮಾಹಿತಿ ನೀಡಿದರು.








