ಪ್ಯಾರಿಸ್/ನವದೆಹಲಿ: ಏರ್ಬಸ್ ಮತ್ತು ಬೋಯಿಂಗ್ ಎರಡರಿಂದಲೂ ಹತ್ತಾರು ಶತಕೋಟಿ ಡಾಲರ್ ಮೌಲ್ಯದ 500 ಜೆಟ್ಲೈನರ್ಗಳಿಗೆ ಐತಿಹಾಸಿಕ ಆರ್ಡರ್ಗಳನ್ನು ನೀಡಲು ಏರ್ ಇಂಡಿಯಾ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಟಾಟಾ ಗ್ರೂಪ್ ಸಂಘಟನೆಯ ಅಡಿಯಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸುತ್ತಿದೆ ಎಂದು ಉದ್ಯಮದ ಮೂಲಗಳು ಭಾನುವಾರ ರಾಯಿಟರ್ಸ್ಗೆ ತಿಳಿಸಿವೆ.
ವರದಿ ಪ್ರಕಾರ, ಈ ಆರ್ಡರ್ಗಳಲ್ಲಿ 400 ಕಿರಿದಾದ ಗಾತ್ರದ ಜೆಟ್ಗಳು ಮತ್ತು ಏರ್ಬಸ್ A350, ಬೋಯಿಂಗ್ 787 ಮತ್ತು 777 ಗಳು ಸೇರಿದಂತೆ 100 ಅಥವಾ ಅದಕ್ಕಿಂತ ಹೆಚ್ಚು ಅಗಲವಾದ ಜೆಟ್ಗಳು ಸೇರಿವೆ ಎಂದು ಅವರು ತಿಳಿಸಲಾಗಿದೆ. ತಮ್ಮ ಹೆಸರು ಹೇಳಲು ನಿರಾಕರಿಸಿದ ಅವರು, ಮುಂದಿನ ದಿನಗಳಲ್ಲಿ ಬೃಹತ್ ಒಪ್ಪಂದದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ಬಗ್ಗೆ ಏರ್ಬಸ್ ಮತ್ತು ಬೋಯಿಂಗ್ ಪ್ರತಿಕ್ರಿಯಿಸಲು ನಿರಾಕರಿಸಿವೆ. ಇನ್ನೂ ಟಾಟಾ ಗ್ರೂಪ್ ಕೂಡ ಈ ಬಗ್ಗೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.