ದಾವಣಗೆರೆ: ಶಾಸಕ ಎಂಪಿ. ರೇಣುಕಾಚಾರ್ಯ ಕ್ಷೇತ್ರ ಹೊನ್ನಾಳಿ ತಾಲೂಕು ಕತ್ತಿಗೆ ಗ್ರಾಮದಲ್ಲಿ ದೇವಸ್ಥಾನದ ಅರ್ಚಕರೊಬ್ಬರು ದೇವರಿಗೆ ವಿಚಿತ್ರ ಪೂಜೆ ಮಾಡುತ್ತಿದ್ದಾರೆ.
BIGG NEWS: ಗದಗನಲ್ಲಿ ಏಕಾಏಕಿ ಕುಸಿದ ಭೂಮಿ, ಅಲ್ಲಿಂದಲೇ ಉಕ್ಕಿ ಹರಿದಿದೆ ನೀರು; ನೋಡಲು ಮುಗಿಬಿದ್ದ ಜನರು
ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ದೇವರಿಗೆ ಪೂಜೆ ಮಾಡುವ ಅರ್ಚಕನೇ ರೀತಿ ಮಾಡಿದ್ರೆ ಹೇಗೆ? ಎಂದು ಜನಸಾಮನ್ಯರು ಪ್ರಶ್ನೆ ಮಾಡುತ್ತಿದ್ದಾರೆ. ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ವಿಚಿತ್ರ ಪೂಜೆಯಿಂದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
BIGG NEWS: ಗದಗನಲ್ಲಿ ಏಕಾಏಕಿ ಕುಸಿದ ಭೂಮಿ, ಅಲ್ಲಿಂದಲೇ ಉಕ್ಕಿ ಹರಿದಿದೆ ನೀರು; ನೋಡಲು ಮುಗಿಬಿದ್ದ ಜನರು
ಬೇಡರ ಕಣ್ಣಪ್ಪ ಶಿವನಿಗೆ ಒಂದು ಕಣ್ಣು ದಾನ ಕೊಟ್ಟು ಇನ್ನೊಂದು ಕಣ್ಣು ಕೊಡಲು ಶಿವಲಿಂಗದ ಮೇಲೆ ಕಾಲಿಡುವಂತೆ ಈ ಅರ್ಚಕ ಮಹೇಶ್ವರಯ್ಯ, ಆಂಜನೇಯ ಸ್ವಾಮೀ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುತ್ತಾರೆ. ಅರ್ಚಕನ ಪೂಜೆ ವಿಧಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಅರ್ಚಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.