ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಮೆಸ್ಕಾಂ ಸಿಬ್ಬಂದಿ ನಿರ್ಲಕ್ಷಕ್ಕೆ ರೈತರೊಬ್ಬರು ಬಲಿಯಾಗಿದ್ದಾರೆ ತುಂಡಾಗಿ ಬಿದ್ದಿದ್ದ ನಿರಂತರ ಜ್ಯೋತಿ ತಂತಿ ತಗುಲಿ ರೈತ ಸಾವನ್ನಪ್ಪಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರಡಿಹಳ್ಳಿಯಲ್ಲಿ ನಡೆದಿದೆ.
ಹನುಮಂತಪ್ಪ(45) ಎನ್ನುವ ರೈತ ಸಾವನ್ನಪ್ಪಿದ್ದು,, ತುಂಡಾಗಿ ಬಿದ್ದಿದ್ದ ನಿರಂತರ ಜ್ಯೋತಿ ತಂತಿ ತುಳಿದು ರೈತ ಹನುಮಂತಪ್ಪ ಸಾವನಪ್ಪಿದ್ದಾರೆ. ಇದೀಗ ಹನುಮಂತಪ್ಪನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದು ಕಡೂರು ಮೆಸ್ಕಾಂ ಕಚೇರಿ ಮುಂದೆ ಮೃತ ಹನುಮಂತಪ್ಪನ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.






