ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ, ಚಾಮರಾಜನಗರ
ಚಾಮರಾಜನಗರ: ಸದಾ ಒತ್ತಡದಿಂದಲೇ ಕೆಲಸ ನಿರ್ವಹಿಸುವ ಪೊಲೀಸರು ಇಂದು ಮಹಿಳಾ ಪೇದೆಯೊಬ್ಬರಿಗೆ ಠಾಣೆಯಲ್ಲಿ ಸೀಮಂತ ಮಾಡಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.
BIGG NEWS: ದಸರಾ ಹಿನ್ನೆಲೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಹರಿದುಬಂದ ಭಕ್ತಸಾಗರ
ಕೆಲಸದ ಒತ್ತಡ ನಡುವೆಯೂ ಪೊಲೀಸರು ಒಳ್ಳೆಯ ಕೆಲಸಗಳನ್ನು ಮಾಡುತ್ತಿಲೇ ಇರುತ್ತಾರೆ. ಆದರೆ, ಅವು ಸಮಾಜದ ಮುಂಚೂಣಿಗೆ ಬರುವ ಸಾಧ್ಯತೆಗಳು ವಿರಳ. ಅದರಲ್ಲೂ ಮಹಿಳಾ ಪೊಲೀಸರಿಗೆ ಒತ್ತಡ ಹೆಚ್ಚಾಗಿರುತ್ತದೆ. ಇದರ ನಡುವೆಯೂ ಸಹೋದ್ಯೋಗಿಗಳು ಮಹಿಳಾ ಪೇದೆಗೆ ಠಾಣೆಯಲ್ಲಿಯೇ ಸೀಮಂತ ಕಾರ್ಯ ನೆರವೇರಿಸಿದ್ದಾರೆ.
BIGG NEWS: ದಸರಾ ಹಿನ್ನೆಲೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಹರಿದುಬಂದ ಭಕ್ತಸಾಗರ
ಚಾಮರಾಜನಗರ ತಾಲ್ಲೂಕಿನ ರಾಮಸಮುದ್ರ ಪೂರ್ವ ಠಾಣಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ರೂಪಶ್ರಿ ಅವರಿಗೆ ಸೀಮಂತ ಮಾಡಿ ಸಂಭ್ರಮಿಸಿದರು.ಸಿಬ್ಬಂದಿಯ ಈ ಒಂದೊಳ್ಳೆ ಕೆಲಸಕ್ಕೆ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒತ್ತಡದ ನಡುವೆಯೂ ಮಹಿಳಾ ಸಿಬ್ಬಂದಿಗೆ ಸೀಮಂತ ಮಾಡಿ ಗಮನ ಸೆಳೆದರು. ಸಿಬ್ಬಂದಿಗಳ ಕಾರ್ಯಕ್ಕೆ ಸೀಮಂತ ಮಾಡಿಸಿಕೊಂಡ ಮಹಿಳಾ ಪೇದೆ ಕೃತಜ್ಞತೆ ಸಲ್ಲಿಸಿದ್ದಾರೆ.