ಬೆಂಗಳೂರು : ಬೆಂಗಳೂರಲ್ಲಿ ಇದೀಗ ಮತ್ತೆ ಲಾಂಗು ಮತ್ತು ಮಚ್ಚುಗಳು ಝಳಪಿಸಿದ್ದು, ಅಡ್ಡಾದಿಡ್ಡಿ ಬೈಕ್ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟೆಂಪೋ ಚಾಲಕನ ಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಲಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನ ಇಮ್ಮಡಿಹಳ್ಳಿ ರಸ್ತೆಯಲ್ಲಿ ಈ ಒಂದು ಕೃತ್ಯ ಎಸಗಲಾಗಿದೆ. ಟಿಪೋಚಾಲಕ ಅಡ್ಡಾದಿಡ್ಡಿ ಬೈಕ್ ಯಾಕೆ ಚಲಾಯಿಸುತ್ತೀಯಾ ಎಂದು ಕೇಳಿದ್ದಕ್ಕೆ ಬೈಕ್ ಸವಾರ ತನ್ನ ಗ್ಯಾಂಗ್ ನೋಂದಿಗೆ ಬಂದು ಲಾಂಗು ಮಚ್ಚುಗಳಿಂದ ಟೆಂಪೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೂಡಲೇ ಘಟನಾ ಸ್ಥಳಕ್ಕೆ ವೈಟ್ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.