ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳನ್ನು ಟ್ವಿಟ್ಟರ್ ನಲ್ಲಿ ಕರ್ನಾಟಕ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಉಕ್ರೇನ್ ನಿಂದ ಮರಳಿದಂತ ವೈದ್ಯಕೀಯ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸೇರಿದಂತೆ ವಿವಿಧ ವಿಚಾರಗಳ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದೆ.
ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಸೂಪರ್ ಸ್ಟಾರ್ ಕಮಲ್ ಹಾಸನ್ | Bharat Jodo Yatra
ಈ ಕುರಿತಂತೆ ಸರಣಿ ಟ್ವಿಟ್ ಮಾಡಿದ್ದು, ವರ್ಷ ಕಳೆದರೂ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ಉಕ್ರೇನ್ನಿಂದ ಮರಳಿದ ವಿದ್ಯಾರ್ಥಿಗಳ ವೈದ್ಯಕೀಯ ವ್ಯಾಸಂಗದ ತೊಡಕುಗಳನ್ನು ನಿವಾರಿಸಲಿಲ್ಲ. ಅವರ ಭವಿಷ್ಯಕ್ಕೆ ದಾರಿ ತೋರಲಿಲ್ಲ. ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಪಿಆರ್ ಸ್ಟಂಟ್ಗೆ ಬಳಸಿಕೊಳ್ಳಲು ಇದ್ದ ಆಸಕ್ತಿ ಅವರ ಭವಿಷ್ಯ ರೂಪಿಸುವಲ್ಲಿ ತೋರದಿರುವುದೇಕೆ ಬಿಜೆಪಿ ಎಂದು ಪ್ರಶ್ನಿಸಿದೆ.
ವರ್ಷ ಕಳೆದರೂ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ಉಕ್ರೇನ್ನಿಂದ ಮರಳಿದ ವಿದ್ಯಾರ್ಥಿಗಳ ವೈದ್ಯಕೀಯ ವ್ಯಾಸಂಗದ ತೊಡಕುಗಳನ್ನು ನಿವಾರಿಸಲಿಲ್ಲ. ಅವರ ಭವಿಷ್ಯಕ್ಕೆ ದಾರಿ ತೋರಲಿಲ್ಲ.
ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಪಿಆರ್ ಸ್ಟಂಟ್ಗೆ ಬಳಸಿಕೊಳ್ಳಲು ಇದ್ದ ಆಸಕ್ತಿ ಅವರ ಭವಿಷ್ಯ ರೂಪಿಸುವಲ್ಲಿ ತೋರದಿರುವುದೇಕೆ @BJP4Karnataka? pic.twitter.com/d86d7L16xC
— Karnataka Congress (@INCKarnataka) December 24, 2022
ನಗರಾಭಿವೃದ್ಧಿ ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಇದ್ದರೂ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ, ಸಿಎಂ ನಗರೋತ್ತಾನ ಯೋಜನೆ ವಿಫಲವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯನ್ನು ಹಳ್ಳ ಹಿಡಿಸಿದ್ದಲ್ಲದೆ ಸಿಎಂ ನಗರೋತ್ತಾನ ಯೋಜನೆಯಿಂದ 108 ಕೋಟಿಯನ್ನು ಬೇರೆಡೆ ವರ್ಗಾಯಿಸುವ ಮೂಲಕ ಈ ಸರ್ಕಾರ ಅಭಿವೃದ್ಧಿ ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ವಾಗ್ಧಾಳಿ ನಡೆಸಿದೆ.
ನಗರಾಭಿವೃದ್ಧಿ ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಇದ್ದರೂ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ, ಸಿಎಂ ನಗರೋತ್ತಾನ ಯೋಜನೆ ವಿಫಲವಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯನ್ನು ಹಳ್ಳ ಹಿಡಿಸಿದ್ದಲ್ಲದೆ ಸಿಎಂ ನಗರೋತ್ತಾನ ಯೋಜನೆಯಿಂದ 108 ಕೋಟಿಯನ್ನು ಬೇರೆಡೆ ವರ್ಗಾಯಿಸುವ ಮೂಲಕ ಈ ಸರ್ಕಾರ ಅಭಿವೃದ್ಧಿ ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದೆ. pic.twitter.com/li16HSuj5D
— Karnataka Congress (@INCKarnataka) December 24, 2022
ಅಲೆಮಾರಿ ಸಮುದಾಯಗಳಿಗೆ ಬಿಜೆಪಿ ಸರ್ಕಾರ ಮಹಾದ್ರೋಹ ಎಸಗಿದೆ. ಅಲೆಮಾರಿ ಸಮುದಾಯಕ್ಕೆ ಸೇರದ ವ್ಯಕ್ತಿಯನ್ನು ಅಲೆಮಾರಿ ನಿಗಮದ ಅಧ್ಯಕ್ಷನನ್ನಾಗಿ ಮಾಡಿದೆ. ನಿಗಮಕ್ಕೆ ನಮ್ಮ ಸರ್ಕಾರ ₹100 ಕೋಟಿ ನೀಡಿತ್ತು, ಬಸವರಾಜ ಬೊಮ್ಮಾಯಿ ಅವರು ನೀಡಿದ್ದು ₹6 ಕೋಟಿ ಮಾತ್ರ ಸಣ್ಣ ಹಾಗೂ ಅಶಕ್ತ ಸಮುದಾಯಗಳೆಂದರೆ ಬಿಜೆಪಿ ಸರ್ಕಾರಕ್ಕೆ ಅಸಡ್ಡೆಯೇ? ಎಂದು ಕೇಳಿದೆ.
ಅಲೆಮಾರಿ ಸಮುದಾಯಗಳಿಗೆ ಬಿಜೆಪಿ ಸರ್ಕಾರ ಮಹಾದ್ರೋಹ ಎಸಗಿದೆ.
◆ಅಲೆಮಾರಿ ಸಮುದಾಯಕ್ಕೆ ಸೇರದ ವ್ಯಕ್ತಿಯನ್ನು ಅಲೆಮಾರಿ ನಿಗಮದ ಅಧ್ಯಕ್ಷನನ್ನಾಗಿ ಮಾಡಿದೆ
◆ನಿಗಮಕ್ಕೆ ನಮ್ಮ ಸರ್ಕಾರ ₹100 ಕೋಟಿ ನೀಡಿತ್ತು, @BSBommai ಅವರು ನೀಡಿದ್ದು ₹6 ಕೋಟಿ ಮಾತ್ರ
ಸಣ್ಣ ಹಾಗೂ ಅಶಕ್ತ ಸಮುದಾಯಗಳೆಂದರೆ @BJP4Karnataka ಸರ್ಕಾರಕ್ಕೆ ಅಸಡ್ಡೆಯೇ?
— Karnataka Congress (@INCKarnataka) December 24, 2022
ಬಡವರಿಗೆ, ಕೂಲಿ ಕಾರ್ಮಿಕರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್ಗಳ ಮೇಲೆ ಬಿಜೆಪಿ ಸರ್ಕಾರಕ್ಕೆ ಅಪರಿಮಿತ ದ್ವೇಷವಿದೆ. ಈ ದ್ವೇಷ ಬಡವರ ಮೇಲೋ, ಇಂದಿರಾ ಕ್ಯಾಂಟೀನ್ ಮೇಲೋ ಬಿಜೆಪಿ ? ಜನರಿಗೆ ಅನುಕೂಲಕರ ಯೋಜನೆ ರೂಪಿಸುವ ಯೋಗ್ಯತೆಯಂತೂ ಇಲ್ಲ, ಜಾರಿಯಲ್ಲಿದ್ದ ಯೋಜನೆಗಳನ್ನು ಉಳಿಸುವ ಯೋಗ್ಯತೆಯೂ ಇಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಎಂದು ಕಿಡಿಕಾರಿದೆ.
ಬಡವರಿಗೆ, ಕೂಲಿ ಕಾರ್ಮಿಕರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್ಗಳ ಮೇಲೆ ಬಿಜೆಪಿ ಸರ್ಕಾರಕ್ಕೆ ಅಪರಿಮಿತ ದ್ವೇಷವಿದೆ.
ಈ ದ್ವೇಷ ಬಡವರ ಮೇಲೋ, ಇಂದಿರಾ ಕ್ಯಾಂಟೀನ್ ಮೇಲೋ @BJP4Karnataka?
ಜನರಿಗೆ ಅನುಕೂಲಕರ ಯೋಜನೆ ರೂಪಿಸುವ ಯೋಗ್ಯತೆಯಂತೂ ಇಲ್ಲ, ಜಾರಿಯಲ್ಲಿದ್ದ ಯೋಜನೆಗಳನ್ನು ಉಳಿಸುವ ಯೋಗ್ಯತೆಯೂ ಇಲ್ಲವೇ @BSBommai ಅವರೇ? pic.twitter.com/aN4M3kCqW9
— Karnataka Congress (@INCKarnataka) December 24, 2022
ಅಂಬೇಡ್ಕರ್ ನಿಗಮದಲ್ಲಿ ನಕಲಿ ಫಲಾನುಭವಿಗಳ ಹಗರಣ ಹಾಗೂ ಗಂಗಾ ಕಲ್ಯಾಣ ಹಗರಣ ನಡೆದಿರುವುದು ಸಾಬೀತಾಗಿದೆ. ಎಲ್ಲಾ ಹಗರಣಗಳ ಬಗ್ಗೆ ಕಾಂಗ್ರೆಸ್ ಆರೋಪಿಸಿದಾಗ ನಿರಾಕರಿಸುತ್ತಿದ್ದ ಬಿಜೆಪಿ ಈಗ ಅದೇ ಹಗರಣಗಳನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ವಿಧಾನ ಸೌಧ ವ್ಯಾಪಾರ ಸೌಧವಾಗಿರುವುದು ಖಾತ್ರಿಯಾಯ್ತಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದೆ.
ಅಂಬೇಡ್ಕರ್ ನಿಗಮದಲ್ಲಿ ನಕಲಿ ಫಲಾನುಭವಿಗಳ ಹಗರಣ ಹಾಗೂ
ಗಂಗಾ ಕಲ್ಯಾಣ ಹಗರಣ ನಡೆದಿರುವುದು ಸಾಬೀತಾಗಿದೆ.ಎಲ್ಲಾ ಹಗರಣಗಳ ಬಗ್ಗೆ ಕಾಂಗ್ರೆಸ್ ಆರೋಪಿಸಿದಾಗ ನಿರಾಕರಿಸುತ್ತಿದ್ದ @BJP4Karnataka ಈಗ ಅದೇ ಹಗರಣಗಳನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ
ವಿಧಾನ ಸೌಧ ವ್ಯಾಪಾರ ಸೌಧವಾಗಿರುವುದು ಖಾತ್ರಿಯಾಯ್ತಲ್ಲವೇ @BSBommai ಅವರೇ? pic.twitter.com/2yfvRxk4r7
— Karnataka Congress (@INCKarnataka) December 24, 2022